ಕೊಡ್ಲಿಪೇಟೆ, ಮಾ. ೧೫: ರಾಜ್ಯ ಸರ್ಕಾರದ ಕಂದಾಯ ಇಲಾಖೆ ಮೂಲಕ ಚಾಲನೆಯಲ್ಲಿರುವ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಯಡಿ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ದಾಖಲೆಗಳನ್ನು ಮನೆ ಬಾಗಿಲಿಗೆ ವಿತರಿಸಲಾಯಿತು.
ದೊಡ್ಡಕೊಡ್ಲಿ ಗ್ರಾಮ ವ್ಯಾಪ್ತಿಯ ಸಾರ್ವಜನಿಕರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು, ದಾಖಲೆಗಳನ್ನು ವಿತರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್ ಗ್ರಾಮದ ಜಯರಾಮ್ ಆಚಾರ್ ಅವರಿಗೆ ದಾಖಲಾತಿಯನ್ನು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದಾ ಅವರು ಶಿರಹ ಗ್ರಾಮದಲ್ಲಿ, ಬೆಸೂರು ಪಂಚಾಯಿತಿ ಅಧ್ಯಕ್ಷೆ ಕೀರ್ತಿ ಅವರು ನಿಲುವಾಗಿಲು ಗ್ರಾಮದಲ್ಲಿ, ಹಂಡ್ಲಿ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ ಅವರು ಹುಲುಸೆ ಗ್ರಾಮದಲ್ಲಿ ಕಂದಾಯ ದಾಖಲಾತಿಗಳನ್ನು ವಿತರಿಸಿದರು.
ಹೋಬಳಿ ಉಪ ತಹಶೀಲ್ದಾರ್ ಪುರುಷೋತ್ತಮ್, ಕಂದಾಯ ಪರಿವೀಕ್ಷಕ ಮನುಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಚೈತ್ರ, ಶ್ವೇತಾಶ್ರೀ, ಗ್ರಾಮ ಸಹಾಯಕರುಗಳಾದ ಲೋಹಿತ್, ರಾಜು, ಮಹೇಶ್, ಭೀಮೇಶ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಈ ಸಂದರ್ಭ ಹಾಜರಿದ್ದರು.