ಸಿದ್ದಾಪುರ: ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಿದ ಹಿನ್ನೆಲೆ ಸಿದ್ದಾಪುರದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನಗರದ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಈ ಸಂದರ್ಭ ಜಿಲ್ಲಾ ಬಿಜೆಪಿ ಮುಖಂಡ ಅನಿಲ್ ಶೆಟ್ಟಿ, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ, ಉಪಾಧ್ಯಕ್ಷ ಮಹೇಶ್ ಕುಮಾರ್, ಪದಾಧಿಕಾರಿಗಳಾದ ಪ್ರವೀಣ್, ಗಿರೀಶ್, ಸುರೇಶ್ ನೆಲ್ಲಿಕಲ್, ಹರಿದಾಸ್, ಗ್ರಾ.ಪಂ. ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಮಡಿಕೇರಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿ.ಜೆ.ಪಿ. ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಮೇಕೇರಿ ಬಿ.ಜೆ.ಪಿ. ಶಕ್ತಿಕೇಂದ್ರದ ನೇತೃತ್ವದಲ್ಲಿ ಕಾರ್ಯಕರ್ತರು ಮೇಕೇರಿಯ ದೇವಾಲಯ ಜಂಕ್ಷನ್‌ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭ ಮಾತನಾಡಿದ ಹಾಕತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಪರ್ಲಕೋಟಿ ಕಾಂತ ಕಾವೇರಪ್ಪ, ದೇಶದಲ್ಲಿನ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಬಿ.ಜೆ.ಪಿ. ವಿರುದ್ಧ ಕೆಲಸ ಮಾಡಿದರು ಜನಾಭಿಪ್ರಾಯ ಬಿ.ಜೆ.ಪಿ. ಪರವಾಗಿ ಮೂಡಲು ಭ್ರಷ್ಟಾಚಾರ ಮುಕ್ತ ಆಡಳಿತವೇ ಕಾರಣವೆಂದರು.

ಪ್ರಮುಖರಾದ ಕಾಯರ ಬೆಳ್ಯಪ್ಪ, ವೇಲಾಯುಧನ್, ದಾಮೋದರ್, ಶಕ್ತಿಕೇಂದ್ರದ ಪ್ರಮುಖ ಕಿರಣ್, ಅಪ್ಪಣ್ಣ, ವಿಜುಹರೀಶ್, ದರ್ಶನ್, ತೋರೆರ ಜನಾರ್ಧನ, ವಸಂತ, ರಾಜನ್, ಗಣಪತಿ, ರಾಜೇಶ್, ಭೀಮಯ್ಯ, ಹೀಮೇಶ್ ಶೇಖರ ಮುಂತಾದವರು ಪಾಲ್ಗೊಂಡಿದ್ದರು.