ಮಡಿಕೇರಿ, ಮಾ. ೧೩: ಅಂರ್ರಾಷ್ಟಿçÃಯ ಸೇವಾ ಸಂಸ್ಥೆಯಾಗಿ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ ರೋಟರಿ ಸಂಸ್ಥೆಯ ಜನಸೇವಾ ಚಟುವಟಿಕೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಹಲವಾರು ಊರುಗಳ ಮೂಲಕ ರೋಟರಿ ಸಾರ್ವಜನಿಕ ಮಾಹಿತಿಯ ರೋಟರಿಯನ್ನು ಸಂಭ್ರಮಿಸಿ ಹೆಸರಿನ ಜಾಥಾ ಹಾದುಹೋಗಲಿದೆ ಎಂದು ರೋಟರಿ ವಲಯ ೬ರ ಉಪ ರಾಜ್ಯಪಾಲ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ರೋಟರಿ ಕಳೆದ ೧೧೭ ವರ್ಷಗಳಿಂದ ವಿಶ್ವವ್ಯಾಪಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ, ಶಿಕ್ಷಣ, ಪರಿಸರಕ್ಕೆ ಸಂಬAಧಿಸಿದ ಸಾವಿರಾರು ಕಾರ್ಯ ಯೋಜನೆಗಳನ್ನು ಆಯೋಜಿಸುತ್ತಾ ಬಂದಿದೆ. ರೋಟರಿಯ ಸೇವಾ ಯೋಜನೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ರೋಟರಿ ಜಿಲ್ಲೆ ೩೧೮೧ ರ ರಾಜ್ಯಪಾಲರಾದ ರವೀಂದ್ರಭಟ್ ಮತ್ತು ಸಾರ್ವಜನಿಕ ಮಾಹಿತಿ ಸಮಿತಿ ಅಧ್ಯಕ್ಷ ಸತೀಶ್ ಬೊಳಾರ್ ತಾ.೧೨ ರಿಂದ ೨೨ ರವರೆಗೆ ಕೊಡಗು ಸೇರಿದಂತೆ ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಬ್ಲಿಕ್ ಇಮೇಜ್ ಜಾಥಾ ಹಮ್ಮಿಕೊಂಡಿದ್ದಾರೆ. ವ್ಯಾನ್ನಲ್ಲಿ ಅಳವಡಿಸಲಾಗಿರುವ ಬೃಹತ್ ಪರದೆಯಲ್ಲಿ ರೋಟರಿಯ ಸಾಧನೆಗಳ ಚಿತ್ರಗಳ ಮೂಲಕ ರೋಟರಿ ಸಂಬAಧಿತ ಮಾಹಿತಿ ನೀಡಲಾಗುತ್ತದೆ. ಈ ವರ್ಷದ ರೋಟರಿ ಸಂದೇಶವಾದ ಸೇವೆಯ ಮೂಲಕ ಜೀವನದಲ್ಲಿ ಬದಲಾವಣೆ ಸಂಬAಧಿತ ಯೋಜನೆಗಳನ್ನೂ ಜಾಥಾದ ಸಂದರ್ಭ ತಿಳಿಸಲಾಗುತ್ತದೆ. ರೋಟರಿಯನ್ನು ಸಂಭ್ರಮಿಸಿ ಎನ್ನುವ ಮುಖೇನ ರೋಟರಿಯ ಗೆಳೆತನ, ಮಾನವೀಯ ಗುಣಗಳ ಪರಸ್ಪರ ಬೆಸೆಯುವಿಕೆ ಬಗ್ಗೆಯೂ ಜನರಿಗೆ ಮಾಹಿತಿ ನೀಡಲಾಗುತ್ತದೆ.
ಮೈಸೂರಿನಲ್ಲಿ ಆಯೋಜಿತ ರೋಟರಿ ಜಿಲ್ಲಾ ಸಮಾವೇಶದ ಸಂದರ್ಭ ತಾ. ೧೨ ರಂದು ಶನಿವಾರ ಚಾಲನೆಗೊಂಡಿರುವ ಈ ಜಾಥಾವು ತಾ. ೧೫ ರಂದು ಕುಶಾಲನಗರ ಮೂಲಕ ಕೊಡಗು ಪ್ರವೇಶಿಸಲಿದೆ. ತಾ. ೧೫ ರಂದು ಸಂಜೆ ೫ ಗಂಟೆಗೆ ಮಡಿಕೇರಿಯ ರಾಜಾಸೀಟ್ನಲ್ಲಿ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್, ಪೊಲೀಸ್ ವರಿಷ್ಠಾಧಿಕಾರಿ ಎಂ. ಅಯ್ಯಪ್ಪ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸೇರಿದಂತೆ ಪ್ರಮುಖರು ಚಾಲನೆ ನೀಡಲಿದ್ದಾರೆ. ರೋಟರಿ ಸಭಾಂಗಣದಲ್ಲಿ ಅಂದು ಸಂಜೆ ೭ ಗಂಟೆಗೆ ಮಡಿಕೇರಿ ರೋಟರಿ ಮತ್ತು ರೋಟರಿ ಮಿಸ್ಟಿಹಿಲ್ಸ್ ಸಂಯುಕ್ತ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.
ತಾ. ೧೬ ರಂದು ಬೆಳಿಗ್ಗೆ ೧೦ ಗಂಟೆಗೆ ಸೋಮವಾರಪೇಟೆ ರೋಟರಿ ಕ್ಲಬ್, ೧೧.೩೦ ಗಂಟೆಗೆ ಶನಿವಾರಸಂತೆ, ರೋಟರಿ ಕ್ಲಬ್, ೧೨.೩೦ ಗಂಟೆಗೆ ಕೊಡ್ಲಿಪೇಟೆ ರೋಟರಿ ಕ್ಲಬ್ಗಳಲ್ಲಿ ಕಾರ್ಯಕ್ರಮ ಆಯೋಜಿತವಾಗಿದ್ದು, ಕೊಡ್ಲಿಪೇಟೆಯಿಂದ ಸುಬ್ರಹ್ಮಣ್ಯಕ್ಕೆ ಜಾಥಾ ವಾಹನ ತೆರಳಲಿದೆ ಎಂದು ಅನಿಲ್ ಹೇಳಿದ್ದಾರೆ.
ರೋಟರಿ ಜಿಲ್ಲೆಯಲ್ಲಿ ಸರಾಸರಿ ರೂ. ೪೦ ಕೋಟಿ ಮೌಲ್ಯದ ಯೋಜನೆಗಳು ಜನರಿಗಾಗಿ ಜಾರಿಗೊಳ್ಳುತ್ತಿದೆ. ಅನೇಕ ವಿಕೋಪಗಳ ಸಂದರ್ಭ ಸೈನ್ಯದ ನಂತರ ರೋಟರಿ ಸದಸ್ಯರ ನೆರವು ಸಂತ್ರಸ್ತರಿಗೆ ತಲುಪಿದೆ. ರೋಟರಿ ವಿಶ್ವಾಸಾರ್ಹತೆಯ ಸಂಸ್ಥೆಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು, ೧೩ ಲಕ್ಷ ರೋಟರಿ ಸದಸ್ಯರು ಭಾರತದಲ್ಲಿದ್ದಾರೆ ಎಂದು ತಿಳಿಸಿದ ಅನಿಲ್ ಈ ಎಲ್ಲಾ ಮಾಹಿತಿಗಳನ್ನು ಜನರಿಗೆ ತಿಳಿಸಿ ರೋಟರಿಯಂಥ ಸಾಮಾಜಿಕ ಸೇವಾ ಸಂಸ್ಥೆಗೆ ಸೇರ್ಪಡೆಯಾಗುವಂತೆ ಪ್ರೇರೇಪಿಸುವುದು ಹಾಗೂ ಜನಸೇವೆಗೆ ಪ್ರೋತ್ಸಾಹ ನೀಡುವುದು ಈ ಜಾಥಾದ ಉದ್ದೇಶವಾಗಿದೆ ಎಂದು ತಿಳಿಸಿದರು.