ಸಿದ್ದಾಪುರ, ಮಾ ೧೩: ಪುರಾತನ ಕಾಲದ ಶ್ರೀ ವಿಷ್ಣುಮೂರ್ತಿ ಸತ್ಯನಾರಾಯಣ ಸ್ವಾಮಿ ದೇವರ ವಾರ್ಷಿಕೋತ್ಸವವನ್ನು ತಾ. ೧೯, ೨೦ ಮತ್ತು ೨೧ ರವರೆಗೆ ಆಚರಿಸಲಾಗುವುದು.

ತಾ. ೧೯ ರಂದು ಪ್ರಾತಃಕಾಲ ೬.೩೦ ರಿಂದ ಗಣಹೋಮ ಉತ್ಸವ ಪ್ರಾರಂಭ ನಂತರ ಸಂಜೆ ೬.೩೦ ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಇಳಿಸುವುದು, ೭ ಗಂಟೆಗೆ ಪ್ರಾರಂಭ ಶುದ್ಧ ಕಲಶ, ದೇವರ ಬಲಿ ಬರುವುದು. ತಾ. ೨೦ ರಂದು ೧೦.೩೦ ಗಂಟೆಗೆ ಸಾಮೂಹಿಕ ಆಶ್ಲೇಷಬಲಿ, ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಪೂಜೆ, ಪಟ್ಟಣಿ, ಶ್ರೀ ಪೊದಮ್ಮ ದೇವಸ್ಥಾನದಲ್ಲಿ ಸಂಜೆ ೫ ಗಂಟೆಗೆ ಅಕ್ಕಿ ಹೇರುವುದು, ದೇವರ ಮೆರವಣಿಗೆ ಮತ್ತು ಮಹಾಪೂಜೆ, ಮಂಗಳಾರತಿ ನಂತರ ಶ್ರೀ ವಿಷ್ಣುಮೂರ್ತಿ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ದೇವರ ಮೆರವಣಿಗೆ, ಮಂಗಳಾರತಿ, ಅನ್ನಸಂತರ್ಪಣೆ. ತಾ. ೨೧ ರಂದು ಬೆಳಿಗ್ಗೆ ೯.೩೦ ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ೧.೩೦ ಗಂಟೆಗೆ ಮಹಾಪೂಜೆ, ೨ ಗಂಟೆಗೆ ಅನ್ನಸಂತರ್ಪಣೆ, ಸಂಜೆ ೩.೩೦ ಗಂಟೆಗೆ ಹಿರಿಯವರು ಹಾಗೂ ಮಕ್ಕಳು ತೆಂಗಿನಕಾಯಿ ಕೀಳುವ ಹಾಗೂ ಈಡುಗಾಯಿ ಹಿಡಿಯುವ ಸ್ಪರ್ಧೆ ನಂತರ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ೫ ಗಂಟೆಗೆ ದೇವರು ಜಳಕಕ್ಕೆ ಹೊರಡುವುದು, ಸಂಜೆ ೭.೩೦ ಗಂಟೆಗೆ ದೇವರ ಪ್ರದಕ್ಷಿಣೆ, ರಾತ್ರಿ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ, ದೇವಸ್ಥಾನದಿಂದ ಭಂಡಾರ ತಕ್ಕರ ಮನೆಗೆ ತಲುಪಿಸುವುದು. ತಾ. ೨೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶುದ್ಧ ಕಲಶ, ಮಹಾಪೂಜೆ, ಮಧ್ಯಾಹ್ನ ೧ ಗಂಟೆಗೆ ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ.