ಪೊನ್ನಂಪೇಟೆ, ಮಾ. ೧೦: ಗೋಣಿಕೊಪ್ಪಲು ಕಾವೇರಿ ಕಾಲೇಜು ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಐಕ್ಯೂಎಸಿ ಸೆಲ್ ಸಂಯುಕ್ತ ಆಶ್ರಯದಲ್ಲಿ ಪದವಿಪೂರ್ವ ಕಾಲೇಜುಗಳ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗಾಗಿ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಕಾವೇರಿ ಅಚಿಂತ್ಯ ಟೆಕ್ ಫೆಸ್ಟ್ -೨ ಆಯೋಜಿಸಲಾಗಿತ್ತು. ಫೆಸ್ಟ್ನ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಪೊನ್ನಂಪೇಟೆ ಹಳ್ಳಿಗಟ್ಟುವಿನ ಸಿಇಟಿ ಪದವಿಪೂರ್ವ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು. ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ವಿವಿಧ ಸ್ಪರ್ಧೆಗಳ ಫಲಿತಾಂಶ: ಸ್ಕೆಚ್ ಸ್ಪರ್ಧೆಯಲ್ಲಿ ಸಿದ್ದಾಪುರ ಇಕ್ರ ಪದವಿಪೂರ್ವ ಕಾಲೇಜಿನ ಅಮೀರಾ ಪ್ರಥಮ, ಪೊನ್ನಂಪೇಟೆ ಸಿಇಟಿ ಕಾಲೇಜಿನ ಲಕ್ಕಿ ಗಣಪತಿ ದ್ವಿತೀಯ, ಕ್ರಾಕ್ ಜಾಕ್ ಸ್ಪರ್ಧೆಯಲ್ಲಿ ಸಿಐಟಿ ಕಾಲೇಜಿನ ತಾನ್ಯ ಅಯ್ಯಪ್ಪ ಹಾಗೂ ಮುತ್ತಣ್ಣ ಪ್ರಥಮ, ವೀರಾಜಪೇಟೆ ಕಾವೇರಿ ಪ.ಪೂ. ಕಾಲೇಜಿನ ಪ್ರಾಸ್ಯ ಹಾಗೂ ಅನುಷ ದ್ವಿತೀಯ, ಕ್ಯಾಲ್ಸಿ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಲಯನ್ಸ್ ಕಾಲೇಜಿನ ಮೈತ್ರಿ ಹಾಗೂ ತಸ್ವಿ ಪ್ರಥಮ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಅಫ್ನಿಯ ಮತ್ತು ಕೀರ್ತಿ ದ್ವಿತೀಯ, ಹಾಟ್ ಸೀಟ್ ಸ್ಪರ್ಧೆಯಲ್ಲಿ ಸಿಐಟಿ ಕಾಲೇಜಿನ ಗೌತಮ್, ಕೃಷ್ಣ, ನಿಶಾಂತ್ ಅಯ್ಯಪ್ಪ ಪ್ರಥಮ, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ತಿಲಕ್, ಸಾನಿಯಾ ದ್ವಿತೀಯ, ಐಸ್ಪೆöÊ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅನುಷ ಮತ್ತು ಅಸ್ಮಿಯ ಪ್ರಥಮ, ಗೆಸ್ ಸ್ಪರ್ಧೆಯಲ್ಲಿ ಸಿದ್ದಾಪುರ ಇಕ್ರ ಪದವಿ ಪೂರ್ವ ಕಾಲೇಜಿನ ಆಫ್ನ ಪ್ರಥಮ, ಗೋಣಿಕೊಪ್ಪಲು ಕಾವೇರಿ ಪ.ಪೂ. ಕಾಲೇಜಿನ ಅಕ್ಷಯ ದ್ವಿತೀಯ, ಪ್ಲೇ ಅಪ್ಸ್ ಸ್ಪರ್ಧೆಯಲ್ಲಿ ಸರ್ವದೈವತಾ ಕಾಲೇಜಿನ ನೀಲಮ್ಮ ಮತ್ತು ಪೂರ್ಣಿಮ ಪ್ರಥಮ, ಅರಮೇರಿ ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನ ಲಕ್ಷ, ದಿವಿನ್ ಕಾವೇರಮ್ಮ ದ್ವಿತೀಯ ಸ್ಥಾನ ಪಡೆದುಕೊಂಡರು.
ಪ್ರಾAಶುಪಾಲ. ಪ್ರೊ. ಎಂ.ಬಿ. ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿ. ಶೆಟ್ಟಿಗೇರಿ ಎನ್.ಬಿ.ಎನ್. ಕನ್‌ಸ್ಟçಕ್ಷನ್ ಮಾಲೀಕರಾದ ನಾಮೆರ ಪ್ರಜ್ಞ ನವೀನ್ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭ ಉಪಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಪ್ರೊ. ಎಂ.ಎಸ್. ಭಾರತಿ, ಕಾರ್ಯಕ್ರಮ ಸಂಚಾಲಕ ಯು.ಟಿ. ಪೆಮ್ಮಯ್ಯ, ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾದ ಎ.ಕೆ. ಕೃತಿ, ಕೆ.ಕೆ. ಬೋಜಮ್ಮ, ಎಸ್.ಎ. ತೀರ್ಥೇಶ್, ದೇಚಮ್ಮ ಹಾಗೂ ಪಲ್ಲವಿ ಹಾಜರಿದ್ದರು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾವೇರಿ ಕಾಲೇಜು ಅಲುಮಿನೈ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಪಿ. ಅಚ್ಚಯ್ಯ, ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ಹಾಗೂ ಇನ್ನಿತರರು ವಿಜೇತರಿಗೆ ಬಹುಮಾನ ವಿತರಿಸಿದರು.