*ಗೋಣಿಕೊಪ್ಪ: ಅಂರ್ರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಗೋಣಿಕೊಪ್ಪಲು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸಹಯೋಗದೊಂದಿಗೆ ಪಟ್ಟಣದ ಮಹಿಳಾ ಉದ್ಯಮಿ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
ಗೋಣಿಕೊಪ್ಪ ಕೆ.ವಿ.ಕೆ. ಸಭಾಂಗಣದಲ್ಲಿ ಕೆ.ವಿ.ಕೆ. ವಿಜ್ಞಾನಿ ಪ್ರಭಾಕರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ನಡೆಯಿತು. ಈ ಸಂದರ್ಭ ಮಹಿಳೆಯರನ್ನು ಉದ್ದೇಶಿಸಿ ಕೆ.ವಿ.ಕೆ. ಮುಖ್ಯಸ್ಥ ಸಾಜು ಜಾರ್ಚ್ ಮಾತನಾಡಿ, ಮಹಿಳೆಯರು ಸ್ವಂತ ದುಡಿಮೆಯಿಂದ ಪುರುಷರೊಂದಿಗೆ ಸಮಾನತೆಯಲ್ಲಿ ಬದುಕುವ ಹಕ್ಕನ್ನು ಹೊಂದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರೌಢಿಮೆಯನ್ನು ಪ್ರದರ್ಶಿಸಿ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ವಿಜ್ಞಾನಿ ಪ್ರಭಾಕರ್ ಅವರು ದೇಶದಲ್ಲಿ ಪ್ರೀತಿ, ವಾತ್ಸಲ್ಯ, ಬಾಂಧವ್ಯಗಳು ಮತ್ತು ಸಂಸ್ಕöÈತಿ, ಆರಾಧನೆಗಳು ಉಳಿದುಕೊಳ್ಳಲು ಮಹಿಳೆಯರೇ ಮುಖ್ಯ ಕಾರಣ. ಸಹನಾ ಶೀಲತೆಯನ್ನು ಮೈಗೂಡಿಸಿಕೊಂಡು ಜವಬ್ದಾರಿಯುತ ಸ್ಥಾನಗಳನ್ನು ನಿಭಾಯಿಸುವ ಚಾಣಕ್ಯತನ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಲ್ಲೇಟಿರ ಪ್ರವಿ ಮೊಣ್ಣಪ್ಪ, ಮಹಿಳೆ ದೇಶದ ಶಕ್ತಿ ಮತ್ತು ಆಸ್ತಿಯಾಗಿದ್ದಾಳೆ. ಮನೆಯನ್ನು ಬೆಳಗುವ ದೀಪದಂತೆ ಸದಾ ತನ್ನ ಕುಟುಂಬಕ್ಕೂ ಮತ್ತು ಸಮಾಜಕ್ಕೂ ಬೆಳಕಿನ ಹಾದಿಯನ್ನು ತೋರುವ ಸ್ಪೂರ್ತಿಯಾಗಿ ಮಹಿಳೆ ತನ್ನ ಪಾತ್ರವನ್ನು ನಿಭಾಯಿಸುತ್ತಿದ್ದಾಳೆ ಎಂದರು.
ಅAಗನವಾಡಿ ಶಿಕ್ಷಕಿ ಲತಾ, ಅಂಗನವಾಡಿ ನಿವೃತ್ತ ಶಿಕ್ಷಕಿ ಜಯಲಕ್ಷಿ÷್ಮ, ಪುಸ್ತಕ ಬರಹಗಾರರಾದ ಗೌರಿ, ಪ್ರಿಯಾದಿಲೀಪ್, ಶಾರದಾ ಮಣಿ ಇವರುಗಳು ಮಹಿಳೆಯರ ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೈ.ಎಂ. ಸವಿತಾ, ಸದಸ್ಯೆ ಎಂ. ಮಂಜುಳಾ, ಗೋಣಿಕೊಪ್ಪ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸ್ಥಳೀಯ ಸಂಪನ್ಮೂಲ ವ್ಯಕ್ತಿ ವರಲಕ್ಷಿ÷್ಮ, ಅಣಬೆ ಕೃಷಿ ತರಬೇತುದಾರರಾದ ರಶ್ಮಿ ಬಾನುಪ್ರಕಾಶ್ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.ವೀರಾಜಪೇಟೆ: ಮಮತೆಯ ಮಮಕಾರ ಸ್ವರೂಪದಂತಿರುವ ಮಹಿಳೆಯು ಅಬಲೆಯಲ್ಲ ಸಬಲೆ. ಪುರುಷರ ಏಳಿಗೆಯ ಹಿಂದೆ ಮಹಿಳೆಯ ತ್ಯಾಗವಿದೆ ಎಂದು ವೀರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮತ್ತು ಅಂರ್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ಪಿ. ತಿಮ್ಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ನಗರ ಕಾಂಗ್ರೆಸ್ ಘಟಕದ ವತಿಯಿಂದ ನಗರದ ಗಣಪತಿ ಆರ್ಕಿಡ್ ಸಭಾಂಗಣದಲ್ಲಿ ಆಯೋಜಿಸಲಾದ ಅಂರ್ರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ಮಹಿಳೆಯರ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಿಮ್ಮಯ್ಯ, ಸಾಧಕರ ಸನ್ಮಾನಕ್ಕೆ ಹರ್ಷ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜುಬೈದ, ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಹೆಚ್.ಕೆ. ರಂಗಮ್ಮ, ಮಾದೇವಿ, ನೆಹರು ನಗರದ ಅಂಗನವಾಡಿ ಕಾರ್ಯಕರ್ತೆ ಮರಿಯ ಟಿ., ಅಂಗನವಾಡಿ ಶಿಕ್ಷಕಿಯಾಗಿರುವ ಎಂ.ಹೆಚ್. ಶಾಹಿದಾ ಅವರುಗಳನ್ನು ಸನ್ಮಾನಿಸಲಾಯಿತು.
ನಗರ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ದಿನೇಶ್ ನಂಬಿಯಾರ್, ಶಾಹುಲ್ ಹಮೀದ್, ವೀರಾಜಪೇಟೆ ಬ್ಲಾಕ್ ಮಹಿಳೆ ಕಾಂಗ್ರೆಸ್ ಅಧ್ಯಕ್ಷೆ ಪೊನ್ನಕ್ಕಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದಿವ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಫಾಸಿಯ ತಬ್ಸಂ, ಆಗಸ್ಟಿನ್ ಬೆನ್ನಿ, ಮಾಜಿ ಸದಸ್ಯರಾದ ಶೀಭಾ ಪ್ರಥ್ವಿನಾಥ್, ವೀರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಫಾರೋಖ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಾನ್ಸನ್, ರಕ್ಷೀತ್ ಚೆಂಗಪ್ಪ, ಮತ್ತು ವಿವಿಧ ಘಟಕದ ಪಧಾದಿಕಾರಿಗಳು, ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.