ಮಡಿಕೇರಿ, ಮಾ. ೧೦: ಕಾರ್ಮಿಕ ಇಲಾಖೆ ವತಿಯಿಂದ ಟೈಲರ್ ದಿನಾಚರಣೆ ಅಂಗವಾಗಿ ನಗರದ ಟೈಲರ್ ಸಂಘಟನೆ ಸಹಯೋಗದಲ್ಲಿ ಇ-ಶ್ರಮ್ ಮತ್ತು ಪಿಎಂಎಸ್ಐಎA ಪಿಂಚಣಿ ನೋಂದಣಿ ಶಿಬಿರ ಏರ್ಪಡಿಸಿ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು.
ಕಟ್ಟಡ ಕಾರ್ಮಿಕರಿಗೆ ನೋಂದಣಿ ಮತ್ತು ನವೀಕರಣ ಮತ್ತು ಸೌಲಭ್ಯಗಳ ಕುರಿತು ತಾಲೂಕು ಕಾರ್ಮಿಕ ಅಧಿಕಾರಿ ಎಂ.ಎA. ಯತ್ನಟ್ಟಿ ಅವರು ಮಾಹಿತಿ ನೀಡಿದರು.
ಕಾರ್ಮಿಕ ಇಲಾಖೆ ವತಿಯಿಂದ ಹೊರತಂದಿರುವ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರು ಇದ್ದರು.