ಮಡಿಕೇರಿ, ಮಾ. ೧೦: ನೂರಾರು ವರ್ಷಗಳ ಇತಿಹಾಸವಿರುವ ನಗರದ ಕುಂಬಳಗೇರಿ ಉಕ್ಕುಡದ ಗ್ರಾಮಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಪುಟ್ಟಣ್ಣ, ಉಪಾಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸುಬ್ರಮಣಿ ಹಾಗೂ ಖಜಾಂಚಿಯಾಗಿ ದೀಪು ಕೃಷ್ಣಪ್ಪ ನೇಮಕಗೊಂಡರು.
ಹಳೆಯ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಹಾಗೂ ಉಪಾಧ್ಯಕ್ಷ ದೇವೇಂದ್ರ, ಖಜಾಂಚಿ ಬಸವರಾಜ, ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಕಚೇರಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.