ಪೊನ್ನಂಪೇಟೆ, ಮಾ. ೧೦: ಟಿ. ಶೆಟ್ಟಿಗೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವತಿಯಿಂದ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಡಿಜಿಟಲ್ ಸೇವಾ ಕೇಂದ್ರ ಕಚೇರಿಯನ್ನು ತೆರೆಯಲಾಗಿದ್ದು, ಒಕ್ಕೂಟದ ಮಾಜಿ ಅಧ್ಯಕ್ಷ ಅಚ್ಚಪ್ಪ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭ ವಲಯದ ಮೇಲ್ವಿಚಾರಕ ನರಸಿಂಹಮೂರ್ತಿ ಇ- ಗ್ರಾಮ ಕಾರ್ಡ್ ಮತ್ತು ಡಿಜಿಟಲ್ ಸೇವಾ ಕೇಂದ್ರದಲ್ಲಿರುವ ಸೌಲಭ್ಯಗಳ ಬಗ್ಗೆ ಹಾಗೂ ಧರ್ಮಸ್ಥಳ ಸಂಘದಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಹರ್ಷ, ತಾಲೂಕು ನೋಡಲ್ ಅಧಿಕಾರಿ ಭರತ್, ಟಿ. ಶೆಟ್ಟಿಗೇರಿ ಒಕ್ಕೂಟ ಅಧ್ಯಕ್ಷೆ ಮೀನಾ, ಸೇವಾ ಪ್ರತಿನಿಧಿ ನಮೀತಾ, ಸಂಘದ ಸದಸ್ಯರಾದ ಚಂದ್ರ ಹಾಗೂ ಗಣೇಶ ಹಾಜರಿದ್ದರು.