ಮಡಿಕೇರಿ, ಮಾ. ೧೦: ರಾಷ್ಟಿçÃಯ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ೨೦೨೧-೨೨ನೇ ಸಾಲಿನಲ್ಲಿ ಕೋವಿಡ್-೧೯ ಸಂದರ್ಭದಲ್ಲಿ ಶಾಲಾ-ಕಾಲೇಜಿಗೆ ದಾಖಲಾಗದೆ ಇರುವ ಅಭ್ಯರ್ಥಿಗಳು, ಶಾಲಾ-ಕಾಲೇಜು ಶಿಕ್ಷಣವನ್ನು ಬಿಟ್ಟಿರುವ ಹಾಗೂ ಶಾಲೆಯಿಂದ ಹೊರಗುಳಿದಿರುವ ೧೫ ರಿಂದ ೪೫ ರ ವಯೋಮಾನದ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಕೌಶಲ್ಯ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಮೊದಲನೇ ಹಂತದಲ್ಲಿ ಕೊಡಗು ಜಿಲ್ಲೆಯಿಂದ ಕುಶಾಲನಗರ ಪಟ್ಟಣದ ಜಿ.ಪಿ.ಯು.ಸಿ. ಪ್ರೌಢಶಾಲೆಯಲ್ಲಿ ಬಯೋಮೆಟ್ರಿಕ್ ಡಾಟಾ ಎಂಟ್ರಿ ಆಪರೇಟರ್ ಹಾಗೂ ಅಸಿಸ್ಟೆಂಟ್ ಬ್ಯೂಟಿ ಥೆರಫಿಸ್ಟ್ ಮತ್ತು ಸರ್ಕಾರಿ ಜೂನಿಯರ್ ಕಾಲೇಜು, ಪೊನ್ನಂಪೇಟೆ ಇಲ್ಲಿ ಆಟೋಮೋಟಿವ್ ಸರ್ವಿಸ್ ಟೆಕ್ನಿನಿಷಿಯನ್ ಹಾಗೂ ಬಯೋಮೆಟ್ರಿಕ್ ಡಾಟಾ ಎಂಟ್ರಿ ಆಪರೇಟರ್ ಜಾಬ್ ರೋಲ್‌ಗಳಿಗೆ ಪ್ರಯೋಗಾಲಯ ಮತ್ತು ಉಪಕರಣಗಳನ್ನು ಬಳಸಿಕೊಂಡು ಉಚಿತ ಕೌಶಲ್ಯ ತರಬೇತಿ ನೀಡಲಾಗುವುದು.

ಸಮಯ: ಬೆಳಿಗ್ಗೆ ೮ ರಿಂದ ೧೦ ಮತ್ತು ಸಂಜೆ ೪ ರಿಂದ ೬ ರ ಸಮಯದಲ್ಲಿ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಆಸಕ್ತರು ಕೌಶಲ್ಯ ಉಚಿತ ತರಬೇತಿ ಪಡೆಯಬಹುದು.

ಆಸಕ್ತ ಅಭ್ಯರ್ಥಿಗಳು hಣಣಠಿs://ಜಿoಡಿms.gಟe/qಖರಿಞhಈಣiಡಿ೪ಐಙ೪Pಜಣ೬ ಈ ಲಿಂಕ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಕೊಡಗು ಜಿಲ್ಲೆ, ಮಡಿಕೇರಿ ಮೊ. ೯೧೧೩೯೩೫೨೨೦, ೯೭೪೧೫೫೬೦೩೬ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಮೊ. ೯೪೪೮೯೯೯೩೪೪, ೯೪೪೮೯೯೯೪೦೦ನ್ನು ಸಂಪರ್ಕಿಸಬಹುದು ಹಾಗೂ ವೆಬ್‌ಸೈಟ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.