ಸೋಮವಾರಪೇಟೆ, ಮಾ. ೧೦: ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಈಗಾಗಲೇ ಸದಸ್ಯತ್ವ ನೋಂದಣಿ ಅಭಿಯಾನ ಪ್ರಗತಿಯಲ್ಲಿದ್ದು, ಬ್ಲಾಕ್ ಕಾಂಗ್ರೆಸ್‌ನಿAದ ೧೦ ಸಾವಿರ ಮಂದಿಗೆ ಕಾಂಗ್ರೆಸ್ ಸದಸ್ಯತ್ವ ನೀಡುವ ಗುರಿ ಹೊಂದಲಾಗಿದೆ. ಮುಂಬರುವ ಜಿಲ್ಲಾ ಪಂಚಾಯತ್, ತಾ.ಪಂ. ಹಾಗೂ ವಿಧಾನ ಸಭಾ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್‌ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡುತ್ತಿದ್ದು, ಬ್ಲಾಕ್‌ಗೆ ಒಳಪಡುವ ೧೦೭ ಬೂತ್‌ಗಳಲ್ಲಿ ತಲಾ ಈರ್ವರು ಎನ್‌ರೋರ‍್ಸ್ ನಿಯೋಜಿಸಲಾಗಿದೆ. ೬ ಜಿ.ಪಂ. ಕ್ಷೇತ್ರ ಹಾಗೂ ೨೪ ಗ್ರಾ.ಪಂ.ಗಳಲ್ಲಿ ಮುಖ್ಯ ಎನ್‌ರೋರ‍್ಸ್ ಗಳನ್ನು ನೇಮಿಸಲಾಗಿದ್ದು, ಬೂತ್ ಮಟ್ಟದಲ್ಲಿ ಕನಿಷ್ಟ ೧೦೦ ಮಂದಿಯನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತಿದೆ ಎಂದರು.

ಜಿ.ಪA., ತಾ.ಪಂ. ಸೇರಿದಂತೆ ವಿಧಾನ ಸಭಾ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸಲಾಗುತ್ತಿದ್ದು, ತಾ. ೩೧ರೊಳಗೆ ಸದಸ್ಯತ್ವದ ವರದಿಯನ್ನು ಡಿಸಿಸಿ ಮೂಲಕ ಕೆಪಿಸಿಸಿಗೆ ಕಳುಹಿಸಲಾಗುವುದು ಎಂದು ಸತೀಶ್ ತಿಳಿಸಿದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಬಸವರಾಜು, ಸದಸ್ಯ ಕೆ.ಪಿ. ದಿನೇಶ್, ಕಾರ್ಯದರ್ಶಿ ಸುನಿಲ್, ಐಗೂರು ವಲಯ ಅಧ್ಯಕ್ಷ ಮುತ್ತಪ್ಪ, ನಗರಾಧ್ಯಕ್ಷ ನಾಗರಾಜು ಅವರುಗಳು ಉಪಸ್ಥಿತರಿದ್ದರು.