ನಾಪೋಕ್ಲು, ಮಾ. ೧೦: ಇಲ್ಲಿನ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕುಲ್ಲೇಟಿರ ಕುಟುಂಬದವರ ಜಾಗಕ್ಕಾಗಿ ಹಾದು ಹೋಗುವ ಕುಂಬಾರಕೇರಿ ರಸ್ತೆಯ ಡಾಂಬರೀಕಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೬೯ ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಮೋರಿ ನಿರ್ಮಾಣ ಮುಂತಾದ ಕಾಮಗಾರಿಯನ್ನು ಕೈಗೆತ್ತಿಕೊಳ್ಳ ಲಾಗಿದ್ದು, ಕಾಮಗಾರಿಯನ್ನು ತುರ್ತಾಗಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭ ಪಶ್ಚಿಮ ಘಟ್ಟ ಕಾವಲುಪಡೆಯ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಕೆಡಿಪಿ ಸಮಿತಿ ನಾಮನಿರ್ದೇಶಿತ ಸದಸ್ಯ ಶಿವಾಚಾಳಿಯಂಡ ಅಂಬಿ ಕಾರ್ಯಪ್ಪ, ಮಡಿಕೇರಿ ತಾಲೂಕು ಬಿ.ಜಿ.ಪಿ. ಪಕ್ಷದ ಪ್ರಧಾನ ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ನಾಪೋಕ್ಲು ಭಗವತಿ ದೇವಾಲಯದ ಅಧ್ಯಕ್ಷ ಕುಲ್ಲೇಟಿರ ಗುರುವಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಕನ್ನಂಬಿರ ಸುದಿ ತಿಮ್ಮಯ್ಯ, ಜಲಜಾಕ್ಷಿ, ಪುಷ್ಪ, ಕುಲ್ಲೇಟಿರ ಅರುಣ ಬೇಬ, ಅಶೋಕ, ಶಕ್ತಿ ಕೇಂದ್ರ ಉಪಾಧ್ಯಕ್ಷ ಕೆಲೇಟಿರ ದೀಪು ದೇವಯ್ಯ, ಕುಲ್ಲೇಟಿರ ವಿಠಲ, ಬೊಪ್ಪಂಡ ಕುಶಾಲಪ್ಪ, ಮತ್ತಿತರರು ಇದ್ದರು.