ಮಡಿಕೇರಿ, ಮಾ. ೧೦: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಕಾಡೆಮಿಯ ವತಿಯಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಜೂನಿಯರ್, ಸಬ್ ಜೂನಿಯರ್ ಹಾಗೂ ಸೀನಿಯರ್ ವಿಭಾಗದ ಮುಕ್ತ ರಾಜ್ಯ ಮಟ್ಟದ ಟೆಕ್ವಾಂಡೊ ಚಾಂಪಿಯನ್ ಶಿಪ್ನಲ್ಲಿ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ೧೬ ಚಿನ್ನ ಹಾಗೂ ೧೪ ಬೆಳ್ಳಿಯ ಸಾಧನೆ ಮಾಡಿದ್ದಾರೆ.
ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ ಆರ್. ಮಾನ್ವಿ ೨ ಚಿನ್ನ, ಆರ್. ಲೋಹಿತ್ ೨ ಚಿನ್ನ, ಬಾರನ ಬಿಂಬಿತ್ ೨ ಚಿನ್ನ, ತೆನ್ನಿರಾ ಶಾನ್ ಪೊನ್ನಪ್ಪ ೨ ಚಿನ್ನ, ಎಂ.ಎಸ್. ಬಿಲಾಲ್ ೨ ಚಿನ್ನ, ಬಿ.ಎಲ್. ಭಾವನ ರೈ ೨ ಚಿನ್ನ, ಕೋಚನ ಲಾಸ್ಯ ೧ ಚಿನ್ನ ಹಾಗೂ ೧ ಬೆಳ್ಳಿ, ಜೀವನ್ ಮುತ್ತು ಕುಮಾರ್ ೧ ಚಿನ್ನ ಮತ್ತು ೧ ಬೆಳ್ಳಿ, ಛಾರ್ವಿ ಕೊಳಂಬೆ ೧ ಚಿನ್ನ ಮತ್ತು ೧ ಬೆಳ್ಳಿ, ಬಿ.ಪಿ. ದರ್ಶನ್ ೧ ಚಿನ್ನ ಮತ್ತು ೧ ಬೆಳ್ಳಿ ತನ್ನದಾಗಿಸಿಕೊಂಡಿದ್ದಾರೆ.
ಕೋಚನ ಲಕ್ಷö್ಯ ೨ ಬೆಳ್ಳಿ, ಬಾರನ ಪ್ರೇಕ್ಷಿತ್ ೨ ಬೆಳ್ಳಿ, ಬಾರನ ಚಿನ್ಮಯಿ ೨ ಬೆಳ್ಳಿ, ಮುಡ್ಯನ ಗೌರವ್ ೨ ಬೆಳ್ಳಿ, ಬೊಮ್ಮುಡಿ ದೇವಿಶ್ರೀ ೨ ಬೆಳ್ಳಿ, ಪುಣ್ಯಶ್ರೀ ಕಟ್ರತನ ೨ ಬೆಳ್ಳಿ ಪಡೆದುಕೊಂಡಿದ್ದಾರೆ.
ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ. ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.