ಮಡಿಕೇರಿ, ಮಾ.೧೦: ಮುಜರಾಯಿ ದೇವಾಲಯಗಳಿಗೆ ಪ್ರಸಕ್ತ ಸಾಲಿನ ಮುಂಗಡ ಪತ್ರ ಸಂದರ್ಭ ಮುಖ್ಯಮಂತ್ರಿಯವರು ಸ್ವಾಯತ್ತತೆ ನೀಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹವಾದರೂ ಮುಂದೆ ಅದರ ನಿರ್ವಹಣೆ ಯಾರಿಂದ ಎನ್ನುವದು ಪ್ರಶ್ನಾರ್ಹವಾಗಿದೆ. ಮುಖ್ಯವಾಗಿ ಕೊಡಗಿನ ತಲಕಾವೇರಿ-ಭಗಂಡೇಶ್ವರ ಕ್ಷೇತ್ರಗಳ ನಿರ್ವಹಣೆಗೆ ಅಗತ್ಯವಾಗಿ ಪ್ರತ್ಯೇಕ ಹಾಗೂ ವಿಶೇಷ ಮಾರ್ಗಸೂಚಿಯನ್ನು ಜಾರಿಗೊಳಿಸಬೇಕಾಗಿದೆ. ಇತರ ದೇವಾಲಯ ಕೇಂದ್ರಗಳAತೆ ತಲಕಾವೇರಿ ಕ್ಷೇತ್ರವನ್ನು ಸಮಾನಾಂತರವಾಗಿ ಪರಿಗಣಿಸುವುದು ಸಲ್ಲದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ಅಧ್ಯಕ್ಷ ಎನ್.ಯು ನಾಚಪ್ಪ ಆಗ್ರಹಿಸಿದ್ದಾರೆ. ಇಂದು ಇಲ್ಲಿನ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಅವರ ಇತರ ಅಭಿಪ್ರಾಯ ಹೀಗಿದೆ:- ‘‘ವೇದ ಕಾಲದ ಏಳು ಪುಣ್ಯ ನದಿಗಳು ಗಂಗೆ-ಯಮುನೆ, ಸಿಂಧು-ನರ್ಮದ, ಗೋದಾವರಿ-ಸರಸ್ವತಿ (ಸರಸ್ವತಿ ಅಗೋಚರ) ಮತ್ತು ಕಾವೇರಿ ಇವುಗಳು. ಇಡೀ ದಕ್ಷಿಣ ಹಿಂದೂಸ್ಥಾನದ ಪ್ರಾಚೀನ ಪವಿತ್ರ ಗ್ರಂಥಗಳಾದ ರಾಮಾಯಣ-ಮಹಾಭಾರತ, ಸ್ಕಂದ ಪುರಾಣ, ಸಂಗA ಸಾಹಿತ್ಯ ಆದಿಯಾಗಿ ಎಲ್ಲ ಗ್ರಂಥಗಳಲ್ಲೂ ಕಾವೇರಿಯ ಮಹತ್ವ ಮತ್ತು ಮಹಾತ್ಮೆಯ ಕುರಿತು ಉಲ್ಲೇಖವಿದೆ. ಕೊಡಗಿನ ತಲಕಾವೇರಿಯಲ್ಲಿ ಜನ್ಮ ತಳೆದ ಜೀವನದಿ ಕಾವೇರಿ ಕೊಡವ ನಾಗರಿಕತೆಯ ವಿಕಾಸ ಕೊಡವ ಆದೀಮ ಸಂಜಾತ ಬುಡಕಟ್ಟಿನ ಉತ್ಪತ್ತಿ/ಉದ್ಭವಕ್ಕೆ ಸಾಕ್ಷಿಯಾಗಿದ್ದು, ಕೊಡವರು ತಮ್ಮ ಕುಲದೇವರೆಂದು ಪರಿಗಣಿಸಿ ಭಕ್ತಿಭಾವದಿಂದ ಆರಾಧಿಸುತ್ತಾರೆ. ಜೀವನದಿ ಕಾವೇರಿಯು ತಲಕಾವೇರಿಯಲ್ಲಿ ಜನ್ಮತಳೆದು ಕೊಡಗಿನ ಮಧ್ಯಭಾಗಕ್ಕಾಗಿ ಪೂರ್ವಾಭಿಮುಖವಾಗಿ ಹರಿದು ತಮಿಳುನಾಡಿನ ಪೂಂಪ್‌ಹಾರ್‌ನಲ್ಲಿ ಬಂಗಾಳಕೊಲ್ಲಿಯನ್ನು ಸಂಗಮಿಸುವ ಮುನ್ನ ಸಮಸ್ತ ದಕ್ಷಿಣ ಭಾರತಕ್ಕೆ ಜಲಧಾತೆ. ಜೀವನದಿ ಕಾವೇರಿಯನ್ನು ದೇಶವಿದೇಶಗಳ ಜನ ಭಕ್ತಿಭಾವದಿಂದ ಪೂಜಿಸುತ್ತಾರೆ. ಸಿಎನ್‌ಸಿ ಯಿಂದಲೂ ತಲಕಾವೇರಿಯಿಂದ ಪೂಂಪ್‌ಹಾರ್‌ತನಕ ಲೀವಿಂಗ್ ಎಂಟಿಟಿ ವಿತ್ ಲೀಗಲ್ ಪರ್ಸನ್ ಸ್ಥಾನಮಾನವನ್ನು ನೀಡಬೇಕೆಂದು ಒತ್ತಾಯಿಸಿ ಜಾಗೃತಿಗೊಳಿಸುವ ಯಾತ್ರೆಯನ್ನು ೨೦೧೮ ಮೇ ತಿಂಗಳಲ್ಲಿ ಹಮ್ಮಿಕೊಂಡಿದ್ದನ್ನು ನೆನಪಿಸಬಯಸುತ್ತೇನೆ.

ಕಾವೇರಿಯು ದೃಶ್ಯಕಾವ್ಯಗಳ ಅತ್ಯದ್ಬುತ ಸಂಗಮ. ಪ್ರಭೆ ಮತ್ತು ದಿವ್ಯದರ್ಶನವು ಜಗತ್ತಿನೆಲ್ಲೆಡೆ ಭಕ್ತ ಸಮೂಹವನ್ನು ಆಕರ್ಷಿಸುತ್ತಿದೆ. ಕಾವೇರಿಯು ಸಹಸ್ರಾರು ಜೀವರಾಶಿಗಳಿಗೆ ಅನ್ನದಾತೆಯಾಗಿದ್ದಾಳೆ. ಕಾವೇರಿಯು ಆಸ್ತಿಕರಿಗೆ ಜಗನ್ಮಾತೆಯಾದರೆ ಅನುವಂಶಿಕವಾಗಿ ಪ್ರಾಚೀನ ಕಾಲದಿಂದಲೂ ಕಾವೇರಿಯನ್ನು ಕುಲದೇವತೆಯೆಂದು ಸ್ವೀಕರಿಸಿರುವ ಕೊಡವರ ಪಾಲಿಗೆ ಜಗತ್ತಿನ ಮೂರು ಅಬ್ರಾಹಮಿಕ್ ಧರ್ಮಗಳ ಪುಣ್ಯ ಕ್ಷೇತ್ರಗಳಂತೆ ಅನುಕ್ರಮವಾಗಿ ೧.ಪುಣ್ಯತೀರ್ಥ, ೨.ಪುಣ್ಯಸ್ನಾನದ ಪಾವನನದಿ ಮತ್ತು ೩.ಪ್ರಧಾನ ತೀರ್ಥಯಾತ್ರಾ ಕ್ಷೇತ್ರವಾಗಿದೆ. ಅರಬ್ಬರಿಗೆ ಹೇಗೆ ಝಂ-ಝA ಪವಿತ್ರ ತೀರ್ಥ

(ಮೊದಲ ಪುಟದಿಂದ) (ಹೋಲಿಸ್ಪಿçಂಗ್) ಕೊಡವರಿಗೆ ಡಿವೈನ್ ಸ್ಪಿçಂಗ್ ಅಂದರೆ ಪವಿತ್ರ ತೀರ್ಥ. ಕ್ರೆöÊಸ್ತರಿಗೆ ಹೇಗೆ ಜೋರ್ಡಾನ್ ನದಿ ಪುಣ್ಯಸ್ನಾನದ ಜೀವನದಿಯೋ ಅದೇ ರೀತಿ ಕೊಡವರಿಗೆ ಕಾವೇರಿ ಪುಣ್ಯಸ್ನಾನದ ಪಾವನ ನದಿ. ಯಹೂದಿಯರಿಗೆ ಹೇಗೆ ಜೆರುಸಲಿಂನಲ್ಲಿರುವ ಟೆಂಪಲ್ ‘ಮೌಂಟ್ ಮೋರಯ್ಯ’ ಪವಿತ್ರ ತೀರ್ಥಯಾತ್ರಾ ಕೇಂದ್ರವೋ ಅದೇ ರೀತಿ ಕೊಡವರಿಗೆ ತಲಕಾವೇರಿ ಪವಿತ್ರ ತೀರ್ಥ ಯಾತ್ರಾ ಕ್ಷೇತ್ರ.

ಕಾವೇರಿ ಕ್ಷೇತ್ರವನ್ನು ಇಲ್ಲಿಯ ತನಕ ಕೊಡಗಿನ ಇತರ ಮುಜರಾಯಿ ಸುಪರ್ದಿಯಲ್ಲಿದ್ದ ದೇವಾಲಯಗಳಾದ ಇರ್ಪು, ಪಾಡಿ ಇಗುತ್ತಪ್ಪ, ಪಾಲೂರಪ್ಪ ಮತ್ತು ಓಂಕಾರೇಶ್ವರ ದೇವನೆಲೆಗಳಿಗೆ ಹೋಲಿಸಲಾಗದು. ಇವುಗಳು ಮುಜರಾಯಿ ಹಿಡಿತದಿಂದ ಬಿಡುಗಡೆ ಹೊಂದಿದೊಡನೆ ಸ್ವಾಯತ್ತತೆಯ ದೇವಾಲಯಗಳಾಗಿ ಪರಿವರ್ತಿತವಾಗುವಾಗ ಸ್ಥಳೀಯ ಜನರ ಸುಪರ್ದಿಯಲ್ಲಿರುವ ಆಡಳಿತ ವ್ಯವಸ್ಥೆ ಯಾವುದೇ ವಿಘ್ನ ಅಥವಾ ಗೊಂದಲ ಸಂಘರ್ಷಗಳಿಲ್ಲದೆ ಸಾಂಗವಾಗಿ ನಿರ್ವಹಣೆಗೊಳ್ಳಲಿವೆ. ಆದರೆ ಕಾವೇರಿಯನ್ನು ಆ ರೀತಿ ಗ್ರಹಿಸಲಾಗದು. ಕಾವೇರಿ ದಕ್ಷಿಣ ಭಾರತದ ಕಾಶಿಯೆಂದು ಖ್ಯಾತಿವೆತ್ತದ್ದು ಇಲ್ಲಿನ ಸ್ವಾಯತ್ತತೆ ಆಡಳಿತ ಸುಸೂತ್ರವಾಗಿ ನಡೆಯುವಂತಾಗಬೇಕು. ಇಲ್ಲಿನ ಅಧಿಕಾರವನ್ನು ತಾವು ಕಕ್ಷೆಗೆ ತೆಗೆದುಕೊಳ್ಳಲು ಹಲವು ಸ್ಥಾಪಿತ ಹಿತಾಸಕ್ತಿಗಳು ರಾಜಕೀಯ ಪ್ರೇರಿತ ಪಟ್ಟ ಭದ್ರ ಹಿತಾಸಕ್ತಿಗಳು ಹುನ್ನಾರ ನಡೆಸಲಿವೆ. ಇಲ್ಲಿ ಭಕ್ತಿ ಭಾವ ಮತ್ತು ಪಾರಂಪರಿಕ ಆರಾಧನೆಗಿಂತ ಸ್ವಪ್ರತಿಷ್ಠೆ-ಒಣಪ್ರತಿಷ್ಠೆಗಳೆ ಮುನ್ನೆಲೆಗೆ ಬರುವ ಅಪಾಯವಿದೆ.

ಇಲ್ಲಿಯವರೆಗೆ ಮುಜರಾಯಿ ಆಡಳಿತದ ಮೂಲಕ ಸರಕಾರದ ನಿಯಂತ್ರಿತ ಆಡಳಿತವಿತ್ತು. ಅಲ್ಲದೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಬೇರೆಯಿತ್ತು. ಇನ್ನು ಮುಂದೆ ಸ್ವಾಯತ್ತತೆಯನ್ನು ಯಾರು ನಿಯಂತ್ರಿಸುತ್ತಾರೆ? ಮತ್ತು ನಿರ್ವಹಿಸುತ್ತಾರೆ? ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ. ಹಳಿತಪ್ಪಿದ ಆಡಳಿತ ನಿರ್ವಹಣೆಯಿಂದ ಹಿಂದೆಲ್ಲ ಅಲ್ಲಿನ ನೌಕರರಿಗೆ ಅರ್ಚಕರಿಗೆ ತಿಂಗಳ ಭತ್ಯೆ-ಸಂಬಳ ಕೂಡಾ ವಿಳಂಬವಾಗುತ್ತಿತ್ತೆAಬುದು ಕೇಳಿ ಬರುತ್ತಿದೆ.

ಒಟ್ಟು ೭೫೦ಟಿಎಮ್‌ಸಿ ನೀರಿನ ಉತ್ಪಾದನೆಯು ಕಾವೇರಿ ನದಿಯದ್ದಾಗಿದ್ದು, ಇದರಲ್ಲಿ ಸುಮಾರು ೧೮೦ಟಿಎಮ್‌ಸಿ ಕೊಡಗಿನ ಉತ್ಪಾದನೆಯಾಗುತ್ತದೆ. ಈ ನೀರನ್ನು ನೈಜವಾಗಿ ಕಾವೇರಿ ಹುಟ್ಟುವ ಪ್ರಧಾನ ಕ್ಯಾಚ್‌ಮೆಂಟ್ ಏರಿಯಾವಾದ ಕೊಡಗು ಸೇರಿದಂತೆ ಕಾವೇರಿ ನದಿಪಾತ್ರದ ಪ್ರದೇಶಗಳಾದ ೧೦ ಜಿಲ್ಲೆಗಳಿಗೆ ಸಮಾನಾಂತರವಾಗಿ ಹಂಚಬೇಕು. ಅದರ ಪ್ರಕಾರ ಕೊಡಗಿನ ಪಾಲು ಸುಮಾರು ೨೮ಟಿಎಮ್‌ಸಿ ನೀರು ದೊರಕಬೇಕು. ಆದರೆ ಆ ನೀರಿನ ಹಕ್ಕಿನ ಅರಿವಿಲ್ಲದ ಕೊಡಗಿಗೆ ಆ ನೀರಿನ ಭಾಗ್ಯವೂ ಇಲ್ಲ ಬಿಡಿ. ಕನಿಷ್ಟ ಮುಂದೆ ಇಲ್ಲಿ ಶಾಶ್ವತ ಶಾಂತಿ, ನೆಮ್ಮದಿ ನೆಲೆಸಿ ಇದೊಂದು ಅಧ್ಯಾತ್ಮಿಕ-ಪಾರಮಾರ್ಥಿಕ ಸನ್ನಿಧಾನವೆಂಬುದನ್ನು ಪುನರ್ ಸ್ಥಾಪಿಸಲು ಸರಕಾರ ಸೂಕ್ತ ಮಾರ್ಗದರ್ಶಿ ಸೂತ್ರವನ್ನು ಪ್ರಕಟಿಸಬೇಕಾಗಿದೆ. ಸಜ್ಜನರು, ಸದ್ಭಕ್ತರು, ಸಾತ್ವಿಕರು, ಮಹಿಳೆಯರು, ಸಮರ್ಪಣಾ ಮನೋಭಾವದವರು, ದೈವೀಸಂಕಲ್ಪ ಹೊಂದಿದವರು, ಅರ್ಚಕರು ಮತ್ತು ಕಾವೇರಿಯನ್ನು ಕುಲದೇವತೆಯೆಂದು ನಂಬಿ ಪಾರಂಪರಿಕವಾಗಿ ಆರಾಧಿಸುವವರುಗಳನ್ನೊಳಗೊಂಡ ಪಾರದರ್ಶಿಕ ಆರ್ಥಿಕ ನಿರ್ವಹಣೆಯೊಂದಿಗೆ ಅತ್ಯುತ್ತಮ ಸ್ವಾಯತ್ತ ಮಂಡಳಿ ರಚಿಸುವ ಮೂಲಕ ಈ ರಾಷ್ಟçದ ಎಲ್ಲ ಪ್ರಮುಖ ತೀರ್ಥ ಕ್ಷೇತ್ರಗಳನ್ನು ಮೀರಿಸುವ ರೀತಿಯಲ್ಲಿ ತಲಕಾವೇರಿ ತಾಣವು ಶ್ರದ್ಧಾ ಕೇಂದ್ರವಾಗಿ ಪರಿಸರ ಸಾತ್ವಿಕತೆಯಿಂದ ವಿಜೃಂಭಿಸುವAತಾಗಬೇಕು. ಆ ಮೂಲಕ ಕಾವೇರಿ ಕ್ಷೇತ್ರ ನೈಜ ಪಾರಮಾರ್ಥಿಕ-ಅಧ್ಯಾತ್ಮಿಕ ನೆಲೆಯಾಗಿ ಪುನರ್ ಸ್ಥಾಪನೆಗೊಳ್ಳಬೇಕು” ಎಂದು ನಾಚಪ್ಪ ತಮ್ಮ ನಿಲುವು ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಚಂಬAಡ ಜನತ್ ಮತ್ತು ಕೂಪದಿರ ಸಾಬು ಉಪಸ್ಥಿತರಿದ್ದರು.