ವೀರಾಜಪೇಟೆ, ಮಾ. ೧೦: ನ್ಯಾಯಾಲಯದಲ್ಲಿದ್ದ ವ್ಯಾಜ್ಯಕ್ಕೆ ಸಂಬAಧಿಸಿದAತೆ ವ್ಯಕ್ತಿಯೊಬ್ಬರಿಗೆ ಲಂಚದ ಬೇಡಿಕೆಯನ್ನಿಟ್ಟಿದ್ದ ನ್ಯಾಯಾಲಯದ ಸಿಬ್ಬಂದಿಗಳು ಲಂಚ ಸ್ವೀಕರಿಸುವಾಗ ಎ.ಸಿ.ಬಿ. ಬಲೆಗೆ ಬಿದ್ದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಿಬ್ಬಂದಿಗಳಾದ ವಿನಯ್ ಮತ್ತು ಲವಕುಮಾರ್ ಲಂಚ ಸ್ವೀಕರಿಸುತಿದ್ದ ಸಂದರ್ಭ ಬಂಧಿತರಾದ ವ್ಯಕ್ತಿಗಳು.
ಸಿದ್ದಾಪುರ ಗುಹ್ಯ ಗ್ರಾಮದ ನಿವಾಸಿ, ಈ ಹಿಂದೆ ಪತ್ರಿಕೆಯೊಂದರ ವರದಿಗಾರರಾಗಿದ್ದ ವಸಂತ್ ಕುಮಾರ್ ಪತ್ರಿಕೆಯಲ್ಲಿ ಶ್ರೀ ಗುಹ್ಯ ಅಗಸ್ತೇಶ್ವರ ಸಹಕಾರ ಸಂಘದಲ್ಲಿ ಗಿರವಿಗಾಗಿ ನೀಡಿರುವ ಚಿನ್ನ ನಕಲಿ ಎಂಬ ಶೀರ್ಷಿಕೆಯ ಅಡಿಯಲ್ಲಿ ವರದಿ ಪ್ರಕಟಿಸಿದ್ದರು. ಪ್ರಕಟವಾದ ಸುದ್ದಿಗೆ ಸಂಬAಧಿಸಿದAತೆ ಪತ್ರಿಕೆ ಮತ್ತು ವರದಿಗಾರನ ಮೇಲೆ ಶ್ರೀ ಗುಹ್ಯ ಅಗಸ್ತೇಶ್ವರ ಸಹಕಾರ ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಕೀಲ ಎಂ.ಎಸ್. ವೆಂಕಟೇಶ್ ಅವರು ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ವೀರಾಜಪೇಟೆ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವ್ಯಾಜ್ಯಗಳು ನಡೆಯುತ್ತಿದ್ದವು ಎನ್ನಲಾಗಿದೆ. ನ್ಯಾಯಾಲಯವು ಸಂಸ್ಥೆಯ ಪರವಾಗಿ ರೂ. ೧.೧೮ ಲಕ್ಷ ಪರಿಹಾರ ಹಣದ ರೂಪದಲ್ಲಿ ನೀಡಬೇಕು ಎಂದು ತೀರ್ಪು ನೀಡಿತ್ತು.
(ಮೊದಲ ಪುಟದಿಂದ) ನ್ಯಾಯಾಲಯದ ಆದೇಶದಂತೆ ಹಣ ನೀಡಲು ಶಕ್ತವಾಗದಿದ್ದಲ್ಲಿ ವಸ್ತುಗಳನ್ನು ಜಪ್ತಿ ಮಾಡುವ ಆದೇಶವಾದ ಹಿನ್ನೆಲೆಯಲ್ಲಿ ಮನೆ ಜಪ್ತಿಗೆ ನ್ಯಾಯಾಲಯದ ಸಿಬ್ಬಂದಿಗಳು ಮುಂದಾಗಿದ್ದರು. ಜಪ್ತಿಯ ಆದೇಶಕ್ಕೆ ಸಂಬAಧಿಸಿದAತೆ ರಾಜಿ ಸಂಧಾನ ಮಾಡುತ್ತೇವೆ ಎಂದು ನ್ಯಾಯಾಲಯದ ಅಮೀನರಾದ ವಿನಯ್ ಹಾಗೂ ಲವಕುಮಾರ್ ವಸಂತ್ ಬಳಿ ಹೇಳಿದ್ದರು. ಹಣದ ಬೇಡಿಕೆಯನ್ನು ಇಟ್ಟಿದ್ದರು. ಮೊದಲು ೧೦ ಸಾವಿರ ಹಣ ನೀಡುವಂತೆಯೂ ನಂತರದಲ್ಲಿ ೫ ಸಾವಿರ ಹಣದ ಬೇಡಿಕೆಯನ್ನು ಇಟ್ಟಿದ್ದರು. ವಸಂತ್ ಈ ಬಗ್ಗೆ ಎ.ಸಿ.ಬಿ.ಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ನ್ಯಾಯಾಲಯದ ಆವರಣದ ಮುಂಭಾಗದಲ್ಲಿ ನ್ಯಾಯಾಲಯದ ಸಿಬ್ಬಂದಿಗೆ ಹಣ ನೀಡುವ ಸಂದರ್ಭ ಧಾಳಿ ನಡೆಸಿದ ಎ.ಸಿ.ಬಿ. ಅಧಿಕಾರಿಗಳು ಹಣದೊಂದಿಗೆ ಈರ್ವರನ್ನು ಬಂಧಿಸಿದ್ದಾರೆ. ಈರ್ವರ ಮೇಲೆ ೭/ಎ ೧೯೮೮ ರ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದು ಮುಂದಿನ ಕಾನೂನು ಕ್ರಮ ಕ್ರಮಕೈಗೊಂಡಿದ್ದಾರೆ.
ಎ.ಸಿ.ಬಿ.ಯ ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ್, ವೃತ್ತ ನಿರೀಕ್ಷಕÀ ಕುಮಾರ್ ಪಿ.ಐ., ಸಿಬ್ಬಂದಿಗಳಾದ ಪ್ರವೀಣ್, ಉಮೇಶ್ ಮತ್ತು ದೀಪಿಕ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.