ಮಡಿಕೇರಿ, ಮಾ.೧೦: ದೇಶದ ಪಂಚರಾಜ್ಯಗಳ ವಿಧಾನಸಭೆೆಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದೆ. ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಬಹುಮತ ಸಾಧಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆಲುವು ಸಾಧಿಸಿ ದ್ವ್ವಿತೀಯ ಬಾರಿಗೆ ಅಧಿಕಾರದ ಗದ್ದುಗೆ ಏರಲಿದ್ದಾರೆ. ಮತದಾರ ಜನತೆ ದೇಶದ ಪ್ರಧಾನಿ ಮೋದಿ ಅವರ ರಾಷ್ಟç ನೇತೃತ್ವಕ್ಕೆ ಮತ್ತೆ ಬೆಂಬಲ ಸೂಚಿಸಿದ್ದಾರೆ. ಫಲಿತಾಂಶದ ಪರಿಪೂರ್ಣ ಸ್ಥಾನಗಳ ಬಗ್ಗೆ ರಾತ್ರಿವರೆಗೂ ಸಮರ್ಪಕ ಮಾಹಿತಿ ದೊರಕದಿದ್ದರೂ ಲಭ್ಯವಿರುವ ಮಾಹಿತಿಯನ್ವಯ ಒಟ್ಟು ೪೦೩ ಸ್ಥಾನಗಳ ಪೈಕಿ ಬಿಜೆಪಿ ೨೭೪, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ೧೨೪, ಬಿ.ಎಸ್.ಪಿ. ೧, ಕಾಂಗ್ರೆಸ್ ಕೇವಲ ೨, ಇತರರು ೨ ಸ್ಥಾನಗಳನ್ನು ಗಳಿಸಿದ್ದಾರೆ.

ಪಂಜಾಬ್‌ನಲ್ಲಿ ಆಪ್ ಜಯದ ಬಿರುಗಾಳಿ ಎಬ್ಬಿಸಿದೆ. ಆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವತ್ ಸಿಂಗ್ ಮಾನ್ ನೇತೃತ್ವದಲ್ಲಿ ಆಪ್‌ನ ರಾಷ್ಟಿçÃಯ ನಾಯಕ ಕೇಜ್ರ‍್ರಿವಾಲ್ ಮಾರ್ಗದರ್ಶನದಲ್ಲಿ ಭಾರೀ ಜಯ ಸಾಧಿಸಿದೆ. ಆಡಳಿತಾರೂಢ ಕಾಂಗ್ರೆಸ್ ಕೈಯಿಂದ ಅಧಿಕಾರ ಕಸಿದುಕೊಂಡಿದೆ.

(ಮೊದಲ ಪುಟದಿಂದ) ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಚರಣ್‌ಜಿತ್ ಸಿಂಗ್ ಚನ್ನಿ, ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ನವ್ಜೋತ್‌ಸಿಂಗ್ ಸಿದ್ದು ಸೋಲನುಭವಿಸಿದ್ದಾರೆ. ಪಂಜಾಬ್‌ನ ೧೧೭ ಸ್ಥಾನಗಳ ಪೈಕಿ ಆಪ್ ೯೨, ಕಾಂಗ್ರೆಸ್ ೧೮, ಅಕಾಲಿದಳ್ ೪, ಬಿಜೆಪಿ ೨, ಇತರರು ೧ ಸ್ಥಾನ ಗಳಿಸಿದ್ದಾರೆ. ಮಣಿಪುರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಮಣಿಪುರದ ಒಟ್ಟು ೬೦ ಸ್ಥಾನಗಳ ಪೈಕಿ ಬಿಜೆಪಿ ೩೨ ಸ್ಥಾನಗಳನ್ನು ಪಡೆದು ಸರಳ ಬಹುಮತ ಸ್ಥಾಪಿಸಿದೆ. ಕಾಂಗ್ರೆಸ್ ೫, ಎನ್ ಪಿ ಪಿ ೭, ಎನ್. ಪಿ ಎಫ್ ೫ ಹಾಗೂ ಇತರರು ೧೧ ಸ್ಥಾನ ಗಳಿಸಿದ್ದಾರೆ.

ಗೋವಾದಲ್ಲಿ ಒಟ್ಟು ೪೦ ಸ್ಥಾನಗಳ ಪೈಕಿ ಬಿಜೆಪಿ ೨೦ ಸ್ಥಾನ ಪಡೆದಿದ್ದು ಅಧಿಕ ಸ್ಥಾನ ಗಳಿಸಿದ್ದರೂ ಬಹುಮತ ಸಾಧಿಸಿಲ್ಲ. ಆದರೆ ಮೂವರು ಪಕ್ಷೇತರರು ಬೆಂಬಲ ಸೂಚಿಸಿರುವುದರಿಂದ ಮತ್ತೆ ಅಧಿಕಾರದ ಗದ್ದುಗೆ ಏರಲು ತಯಾರಿ ನಡೆಸಿದೆ. ಈ ರಾಜ್ಯದಲ್ಲಿ ಬಿಜೆಪಿ ೨೦, ಕಾಂಗ್ರೆಸ್ ೧೨, ಆಪ್ ೨ ಇತರರು ೪ ಸ್ಥಾನ ಗಳಿಸಿದ್ದಾರೆ.

ಉತ್ತರಾಖಂಡ್ ರಾಜ್ಯದಲ್ಲಿ ಬಿಜೆಪಿ ಮರು ಆಡಳಿತ ಚುಕ್ಕಾಣಿ ಹಿಡಿಯಲು ಸ್ಪಷ್ಟ ಬಹುಮತ ಸಾಧಿಸಿದೆ. ಒಟ್ಟು ೭೦ ಸ್ಥಾನಗಳ ಪೈಕಿ ಬಿಜೆಪಿ ೪೮, ಕಾಂಗ್ರೆಸ್ ೧೮, ಇತರರು ೪ ಸ್ಥಾನ ಪಡೆದಿದ್ದಾರೆ.