*ಗೋಣಿಕೊಪ್ಪ, ಮಾ೭: ತಿತಿಮತಿ ಗ್ರಾಮ ಪಂಚಾಯಿತಿ ಜಂಗಲ್‌ಹಾಡಿಯಲ್ಲಿ ಎರಡು ಎಮ್ಮೆ ಕರುಗಳ ಮೇಲೆ ಹುಲಿ ದಾಳಿ ನಡೆಸಿದೆ.

ಜಂಗಲ್‌ಹಾಡಿ ನಿವಾಸಿ ಜಯಾಸಿಂಧು ಅÀವರ ಎರಡು ವರ್ಷದ ಮರ‍್ರಾ ಜಾತಿಯ ಕರುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ಕರುವಿಗೆ ಹುಲಿಯ ಉಗುರುಗಳಿಂದ ಗಾಯಗಳುಂಟಾಗಿದೆ. ಹುಲಿ ಮತ್ತೊಂದು ಕರುವಿನ ಮೇಲೆಯೂ ದಾಳಿ ನಡೆಸಿ ಕೊಂದು ಹಾಕಿದ್ದಲ್ಲದೇ ಕರುವನ್ನು ಸಂಪೂರ್ಣವಾಗಿ ಭಕ್ಷಿಸಿದೆ. ಎರಡು ಕರುಗಳನ್ನು ಮನೆಯ ಸಮೀಪದಲ್ಲಿದ್ದ ಗದ್ದೆಯಲ್ಲಿನ ಬಾವಿಯ ಬಳಿ ಕಟ್ಟಲಾಗಿತ್ತು. ಈ ಸಂದರ್ಭ ಹುಲಿ ದಾಳಿ ನಡೆಸಿದೆ. ಸ್ಥಳಕ್ಕೆ ಮತ್ತಿಗೋಡು ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.