ತಲಕಾವೇರಿ-ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾಗಿದ್ದ ವೀರಾಜಪೇಟೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ಆಗಿನ ಅನುಭವವನ್ನು “ಶಕ್ತಿ” ಯೊಂದಿಗೆ ಈ ಕೆಳಗಿನಂತೆ ಹಂಚಿಕೊAಡಿದ್ದಾರೆ.

ತಲಕಾವೇರಿಯಲ್ಲಿ ೨೦೦೨ ರಲ್ಲಿ ಜೀರ್ಣೋದ್ಧಾರ ಪೂರ್ವಭಾವಿಯಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬAದಿದ್ದ ದೋಷಗಳ ಪರಿಹಾರ ಕಾರ್ಯಗಳು ಸಮರ್ಪಕವಾಗಿ ನಡೆದವು. ಪರಿಹಾರ ಕಾರ್ಯಗಳನ್ನು ರಾತ್ರಿವೇಳೆ ದೊಂದಿ ದೀಪ ಹಿಡಿದು ನಡೆಸಿದುದು ಇನ್ನೂ ಮನದಲ್ಲ್ಲಿ ಬೇರೂರಿದೆ. ಆ ಪರಿಹಾರ ಕಾರ್ಯಗಳೆಲ್ಲ ಸಮರ್ಪಕವಾಗಿ ನಡೆದಿದೆಯೇ ಇಲ್ಲವೇ ಎಂಬ ಕುರಿತು ಸ್ಥಳದಲ್ಲಿಯೇ ಕವಡೆ ಮೂಲಕ ಪ್ರಶ್ನೆಯಿಟ್ಟು ನೋಡಲಾಗುತ್ತಿತ್ತು. ಪುತ್ತೂರಿನ ಜ್ಯೋತಿಷಿ ಗೋಪಾಲಕೃಷ್ಣ ಭಟ್ ಅವರು ಸ್ಥಳದಲ್ಲಿಯೇ ಇದ್ದು ಯಾವ್ಯಾವ ದೋಷಗಳು ಪರಿಹಾರವಾದವು. ಪರಿಹಾರವಾಗದ ದೋಷಗಳಿಗೆ ಸ್ಥಳದಲ್ಲಿಯೇ ವಿವಿಧ ದೈವಗಳಿಗೆ ಹರಕೆ ಕಟ್ಟಿ ಮುಂದುವರಿದಾಗ ಮತ್ತೆ ಜ್ಯೋತಿಷ್ಯ ನೋಡಿದಾಗ ಪರಿಹಾರವಾದುದು ಸ್ಪಷ್ಟಗೊಂಡು ಕೊನೆಗೆ ಎಲ್ಲ ದೋಷಗಳ ನಿವಾರಣೆಯಾದ ಬಳಿಕವಷ್ಟೇ ಜೀರ್ಣೋದ್ಧಾರ ಕಾರ್ಯಕ್ಕೆ ದೈವೀ ಅನುಗ್ರಹ ದೊರಕಿತು.

ಈ ಸಂದರ್ಭಗಳಲ್ಲಿ ನಮಗೆ ಕೊಡಗು ಏಕೀಕರಣ ರಂಗದ ಸಂಪೂರ್ಣ ಸಹಕಾರ ದೊರಕಿತ್ತು. ರಂಗದಿAದ ಇದೇ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಮನವಿ ನೀಡಲಾಗಿತ್ತು. ಆಗ ನಿಯೋಗದಲ್ಲಿ ನಾನೂ ಸೇರಿದಂತೆ ಕೆ.ಪಿ.ಚಂದ್ರಕಲಾ, ಅಜ್ಜಿನಂಡ ತಮ್ಮು ಪೂವಯ್ಯ, ಸುಗುಣ ಮುತ್ತಣ್ಣ, ಬಿದ್ದಾಟಂಡ ಎಸ್. ತಮ್ಮಯ್ಯ, ಜಿ.ಚಿದ್ವಿಲಾಸ್, ಮಂದಪAಡ ಸತೀಶ್, ತೇಲಪಂಡ ಪ್ರಮೋದ್ ಸೋಮಯ್ಯ, ಶ್ರೀಧರ್ ನೆಲ್ಲಿತ್ತಾಯ ಮೊದಲಾದವರು ತೆರಳಿದ್ದೆವು. ತಲಕಾವೇರಿ-ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಸರಕಾರ ತೊಡಗಿಸಿಕೊಳ್ಳಬೇಕು ಎಂದು ಆ ಸಂದರ್ಭ ನಾವು ನೀಡಿದ ಮನವಿಗೆ ಅವರು ಸೂಕ್ತವಾಗಿ ಸ್ಪಂದಿಸಿದ್ದರು.

ಸಾರ್ವಜನಿಕ ಜೀರ್ಣೋದ್ಧಾರ ಸಮಿತಿ ರಚನೆಯಾದ ಬಳಿಕ ಬೃಹತ್ ಯೋಜನೆಯಾಗಿದ್ದುದರಿಂದ ಸರಕಾರವೇ ಜೀರ್ಣೋದ್ಧಾರ ಮಾಡುವಂತೆ ಮತ್ತೆ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಸಮಿತಿಯ ಅಧ್ಯಕ್ಷನಾಗಿದ್ದ ನನ್ನ ಸಹಿತ ನಿಯೋಗವು ಭೇಟಿ ಮಾಡಿತು. ಆಗ ಜಿಲ್ಲೆಯ ಪ್ರಮುಖರುಗಳಾದ ಎಂ.ಸಿ. ನಾಣಯ್ಯ, ಸಚಿವರುಗಳಾಗಿದ್ದ ಸುಮಾ ವಸಂತ್, ಎಂ.ಎA. ನಾಣಯ್ಯ (ಈಗ ದಿವಂಗತರು), ಟಿ. ಜಾನ್, ಸಮಿತಿಯ ಕಾರ್ಯದರ್ಶಿ ಜಿ. ರಾಜೇಂದ್ರ ಮತ್ತಿತರರು ಈ ನಿಯೋಗದಲ್ಲ್ಲಿದ್ದರು. ಸಮಿತಿಯಿಂದ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಅವರಿಗೆ ಪೀಚೆ ಕತ್ತಿಯನ್ನು ಸ್ಮರಣಿಕೆಯಾಗಿ ನೀಡಿದ ನೆನಪು ಇನ್ನೂ ಹಸಿರಾಗಿದೆ. ಆ ಸಂದರ್ಭ ಎಂ.ಸಿ.ನಾಣಯ್ಯ ಮೊದಲಾದವರು ಸಮರ್ಪಕವಾಗಿ ಮನದಟ್ಟು ಮಾಡಿ ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರು ತಲಕಾವೇರಿ-ಭಾಗಮಂಡÀಲ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯವನ್ನು ರಾಜ್ಯ ನೀರಾವರಿ ನಿಗಮದ ಜವಾಬ್ದಾರಿಕೆಗೆ ವಹಿಸಿದರು. ನಮ್ಮ ಜೀರ್ಣೋದ್ಧಾರ ಸಮಿತಿಯನ್ನು ವಿಸರ್ಜಿಸಲಾಯಿತು.

ಅವಿಸ್ಮರಣೀಯ ಅನುಭವ

೨೦೦೬ ರ ಸಂದರ್ಭ ತಲಕಾವೇರಿಯಲ್ಲಿ ಜೀರ್ಣೋದ್ಧಾರ ಕಾರ್ಯ ಮುಗಿದು ಪುನರ್ ಪ್ರತಿಷ್ಠಾಪನಾ ಕಾರ್ಯ ಹಮ್ಮಿಕೊಳ್ಳಲಾಯಿತು. ನನ್ನನ್ನು ಸಮಿತಿಯ ಅಧ್ಯಕ್ಷನಾಗಿ ನೇಮಿಸಿದ್ದು ಸರಕಾರ ಜಿಲ್ಲೆಯ ಭಕ್ತಾದಿಗಳ ಸಹಿತವಾದ ಪುನರ್ ಪ್ರತಿಷ್ಠಾಪನಾ ಸಮಿತಿಯನ್ನು ರಚಿಸಿತು. ಆ ಸಂದರ್ಭ ಕ್ಷೇತ್ರದ ನೀಲೇಶ್ವರ ಪದ್ಮನಾಭ ತಂತ್ರಿಯವರ ನಿರ್ದೇಶನದಲ್ಲಿ ಕಾವೇರಿ ಬ್ರಹ್ಮ ಕುಂಡಿಕೆಯ ದುರಸ್ತಿ ಕಾರ್ಯ ನಡೆಯಿತು. ಹಲವಾರು ವರ್ಷಗಳ ಕಾಲ ಯಾವದೇ ದುರಸ್ತಿಯಿಲ್ಲದೆ ಕುಂಡಿಕೆಯ ಜೋಡಣಾ ಶಿಲೆಗಳು ಶಿಥಿಲಗೊಂಡಿದ್ದವು..

ತಲಕಾವೇರಿಯ ಪವಿತ್ರ ಕುಂಡಿಕೆಯ ದುರಸ್ತಿ ಕಾರ್ಯ ಅನೇಕ ವರ್ಷಗಳಿಂದ ಬಾಕಿಯಿತ್ತು. ಒಳಗಿನ ಮೆದು ಕಲ್ಲು ನೀರಿನ ಒತ್ತಡಕ್ಕೆ ಸಿಲುಕಿ ಜರಿಯುತ್ತಿತ್ತು. ಅಲ್ಲಲ್ಲಿ ನೀರಿನ ಒರತೆಗೆ ತಡೆಯುಂಟಾಗುತ್ತಿತ್ತು. ಸುತ್ತಮುತ್ತಲೂ ಕಲ್ಮಶ ತುಂಬಿ ತುಳುಕುತ್ತಿತ್ತು.

ಈ ದುರಸ್ತಿ ಕಾರ್ಯಕ್ಕೂ ಮುನ್ನ ದೈವ ಸನ್ನಿಧಿಯಲ್ಲಿ ಕಾವೇರಿ ಮಾತೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಾರಂಭಿಸಲಾಯಿತು. ಈ ಕಾರ್ಯಕ್ಕಾಗಿ ಕೇರಳದಿಂದ ಒಂದೂವರೆ ಚದರಡಿ ಅಳತೆಯ ಲ್ಯಾಟರೈಟ್ ಕಲ್ಲನ್ನು ತರಿಸಲಾಗಿತ್ತು. ಕೊಳದ ಹಾಗೂ ಕುಂಡಿಕೆಯ ಜಲವನ್ನು ಖಾಲಿ ಮಾಡಿದ ಬಳಿಕ ಅರ್ಚಕರಾದ ಶ್ರೀನಿವಾಸ್ ಉಡುಪ ಅವರನ್ನು ಕೆಳಗೆ ಇಳಿಸಲಾಯಿತು. ಈ ಸಂದರ್ಭ ನನ್ನೊಂದಿಗೆ ಸ್ಥಳದಲ್ಲಿ ಕ್ಷೇತ್ರದ ನೀಲೇಶ್ವರ ಪದ್ಮನಾಭ ತಂತ್ರಿಯವರು, ಇಂಜಿನಿಯರ್ ಸತ್ಯನಾರಾಯಣ್ ಹಾಗೂ ದೇವಾಲಯದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ಎಸ್. ಎಸ್. ಸಂಪತ್ ಕುಮಾರ್ ಇದ್ದರು.

ದುರಸ್ತಿ ಕಾರ್ಯಕ್ಕೆ ಕನಿಷ್ಟ ಮೂರು ದಿನ ಕಾಲಾವಕಾಶದ ಲೆಕ್ಕಾಚಾರ ಹಾಕಿ ಮೂರು ದಿನಗಳವರೆಗೆ ಭಕ್ತಾದಿಗಳು ಕ್ಷೇತ್ರ ದರ್ಶನಕ್ಕೆ ಬಾರದಂತೆ ವ್ಯವಸ್ಥೆಗೊಳಿಸಲಾಗಿತ್ತು. ಮುಖ್ಯವಾಗಿ ಎಲ್ಲ ಮಾಧ್ಯಮ ಬಂಧುಗಳೂ ನಮ್ಮೊಂದಿಗೆ ಸಹಕರಿಸಿ ದುರಸ್ತಿಯ ಚಿತ್ರಣವನ್ನು ಪ್ರಚಾರ ಮಾಡದೆ ಸಹಕರಿಸಿದರು. ಕುಂಡಿಕೆಯಲ್ಲಿ ಅರ್ಚಕರು ನಿಂತಾಗಲೇ ಗೊತ್ತಾದುದು ಅದು ಸುಮಾರು ಆರು ಅಡಿ ಆಳವಿದೆ ಎಂಬದು. ಶಿಥಿಲಗೊಂಡ ಹಳೆಯ ಕಲ್ಲುಗಳನ್ನು ಒಂದೊAದಾಗಿ ತೆಗೆಯುತ್ತ ನೂತನ ಕಲ್ಲುಗಳನ್ನು ಪೇರಿಸಿಕೊಂಡು ಬರಲಾಯಿತು ಆಗಲೇ ಅರಿವಾದುದು: ಚಿನ್ನದ ನಾಣ್ಯ, ಚಿಲ್ಲರೆ ನಾಣ್ಯ, ಶೀಷದ ತಗಡುಗಳು, ಕೊಳಕು- ಎಲ್ಲ ಒಳ ರಂಧ್ರÀಗಳಿAದ ಬೀಳಲು ಪ್ರ‍್ರಾರಂಭಗೊAಡಿತು. ನೀರಿನ ಒರತೆ ಪವಿತ್ರ ಕುಂಡಿಕೆಯ ಒಳ ಬರಲು ಇವುಗಳೆಲ್ಲ ತಡೆಯಾಗಿದ್ದವು. ನಾಲ್ಕು ಕಡೆÀಯೂ ಚೌಕಾಕಾರದಲ್ಲಿ ಕ್ರಮ ಬದ್ಧವಾಗಿ ಕಲ್ಲುಗಳನ್ನು ಅಲುಗಾಡದ ರೀತಿಯಲ್ಲಿ ತಂತ್ರಿಗಳ ಸೂಕ್ತ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಸುಭದ್ರವಾಗಿ ಇರಿಸಿಕೊಂಡು ಬರಲಾಯಿತು.÷ ಎಲ್ಲ ಕಲ್ಲುಗಳನ್ನು ಒಂದೊAದಾಗಿ ಜೋಡಿಸುತ್ತ ನೀರಿನ ಒರತೆಯೂ ಕುಂಡಿಕೆಯೊಳಗೆ ಸರಾಗವಾಗಿ ಬರಬೇಕು, ಕಲ್ಲೂ ಜಾರಬಾರದು ಎನ್ನುವ ಕೌಶಲ್ಯದೊಂದಿಗೆ ಇರಿಸಿಕೊಂಡು ಬರಲಾಯಿತು. ಈ ನಡುವೆ ಈ ಹಿಂದೆ ಕುಂಡಿಕೆ ಬಳಿಯಿದ್ದ ಸಣ್ಣ ಗುಡಿ ಬಳಿಯಿಂದ ಅಡ್ಡಲಾಗಿ ತೀರ್ಥ ಕುಂಡಿಕೆಗೆ ಸ್ಪರ್ಶವಾಗುವಂತೆ ಗುತ್ತಿಗೆದಾರರು ತ್ರಿಕೋಣಾಕಾರದಲ್ಲಿ ಬೀಂ ಒಂದನ್ನು ಕಟ್ಟಿದ್ದರು. ತಂತ್ರಿಯವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅದನ್ನು ಅಲ್ಲಿಂದ ತೆಗೆಸಿದ ಬಳಿಕವೇ ಕುಂಡಿಕೆಯ ದುರಸ್ತಿ ಕಾರ್ಯ ಪ್ರಾರಂಭಿಸಿದುದು ವಿಶೇಷವೆನಿಸಿತ್ತು. ಏಕೆಂದರೆ, ಆ ಸಿಮೆಂಟ್ ಬೀಂನಿAದ ಭವಿಷ್ಯತ್‌ನಲ್ಲಿ ತೀರ್ಥ ಕುಂಡಿಕೆಗೆ ಬರುವ ನೀರಿನ ಒರತೆ ಕ್ಷೀಣಗೊಳ್ಳ ಬಹುದು ಎನ್ನುವ ಆತಂಕ ತಂತ್ರಿಯವರದ್ದಾಗಿತ್ತು. ಹೀಗಾಗಿ ಅದನ್ನು ತೆಗೆಯಲೇಬೇಕೆಂದು ಅವರು ಪಟ್ಟು ಹಿಡಿದಿದ್ದು ಕೊನೆಗೂ ಅವರ ಒತ್ತಾಯಕ್ಕೆ ಗುತ್ತಿಗೆದಾರರು ತಲೆಬಾಗಲೇಬೇಕಾಯಿತು. ಕಾವೇರಿ ಕುಂಡಿಕೆಯ ದುರಸ್ತಿ ಬಳಿಕ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶುದ್ಧೀಕರಿಸಲಾಯಿತು. ಶುದ್ಧ ಕಲಶವನ್ನು ತಂತ್ರಿಯವರು ಮೂರು ದಿನಗಳ ಕಾಲ ನಡೆಸಿಕೊಟ್ಟರು. ನಮ್ಮ ಸಮಿತಿಯಲ್ಲಿದ್ದ ಮಂಡೀರ ದೇವಿ ಪೂಣಚ್ಚ ಅವರು ಸ್ಥಳದಲ್ಲಿದ್ದು ಆ ಕಾರ್ಯದ ಖರ್ಚು ವೆಚ್ಚ ಭರಿಸಿ ಪಾಲ್ಗೊಂಡರು.

ಧಾರ್ಮಿಕ ಕಾರ್ಯಗಳು

ಮಾತಂಡ ಮೊಣ್ಣಪ್ಪ ಅವರು ಕ್ಷೇತ್ರ‍್ರಗಳ ಕಾಯಕಲ್ಪ ವಿಚಾರದಲ್ಲಿ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದು ಹೀಗೆ: ‘‘ಅನೇಕ ವರ್ಷಗಳ ಬಳಿಕ ನಡೆದ ಜೀರ್ಣೋದ್ಧಾರದ ನಂತರ ತಲಕಾವೇರಿಯಲ್ಲಿ ೨೦೦೬ ರಲ್ಲಿ ಎಲ್ಲ ಹೋಮ ಹವನಾದಿ ಧಾರ್ಮಿಕ ಕಾರ್ಯಗಳು, ಪ್ರಕ್ರಿಯೆಗಳು ಮತ್ತು ಪುನರ್ ಪ್ರತಿಷ್ಠಾಪನೆಗಳನ್ನು ವಿಧ್ಯುಕ್ತವಾಗಿ ನೆರವೇರಿಸಲಾಗಿತ್ತು. ಈ ಎಲ್ಲ ಕಾರ್ಯಗಳನ್ನೂ ಕ್ಷೇತ್ರದ ಹಿರಿಯ ತಂತ್ರಿಗಳಾದ ನೀಲೇಶ್ವರ ಪದ್ಮನಾಭ ತಂತ್ರಿ (ಈಗ ದಿವಂಗತರು) ಅವರ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ ನಡೆಯಿತೇ ಹೊರತು ಯಾರದೇ ವೈಯಕ್ತಿಕ ತೀರ್ಮಾನದಲ್ಲಿ ನಡೆÀದಿಲ್ಲ. ಅತಿ ಸೂಕ್ಷö್ಮತೆಯಿಂದ ಅಚ್ಚುಕಟ್ಟಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಈ ಎಲ್ಲ ಕಾರ್ಯಗಳನ್ನು ಆಗ ಸಮರ್ಪಕವಾಗಿ ಪೂರೈಸಲಾಗಿತ್ತು.

ತಲಕಾವೇರಿಯಲ್ಲಿ ಪ್ರತಿಷ್ಠಾಪನೆ ಬಳಿಕÀ ಭಾಗಮಂಡಲದಲ್ಲಿ ೨೦೦೯ರಲ್ಲಿ ನಡೆದ ಪುನರ್ ಪ್ರತಿಷ್ಠಾಪನಾ ಸನ್ನಿವೇಶ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆÀ, ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದ ತೀರ್ಥರು (ಈಗ ದೈವಾಧೀನರು), ಶ್ರೀ ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ತೀರ್ಥ ಸ್ವಾಮೀಜಿ ಅವರು, ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ಕೈಲಾಸ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಜಯೇಂದ್ರ ಮಹಾಸ್ವಾಮಿಗಳು ಇವರುಗಳೂ ಆಗಮಿಸಿದ್ದು ಅವರುಗಳೊಂದಿಗೆ ಸಮಿತಿಯ ಅಧ್ಯಕ್ಷನಾಗಿ ವೇದಿಕೆ ಹಂಚಿಕೊಳ್ಳ್ಳುವAತಹ ಸೌಭಾಗ್ಯ ನನಗೆ ದೊರೆತಿದ್ದುದು ಇನ್ನೂ ಅವಿಸ್ಮರಣೀಯ ಎಂದು ಮಾತಂಡ ಮೊಣ್ಣಪ್ಪ ಭಾವುಕರಾಗಿ ತಮ್ಮ ಅನುಭವವÀನ್ನು ಮೆಲುಕು ಹಾಕಿದರು.