ಮಡಿಕೇರಿ, ಮಾ. ೩: ನಗರದ ಚೈನ್ ಗೇಟ್ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ೫ ಲಕ್ಷ ರೂ. ವೆಚ್ಚದಲ್ಲಿ ರೋಟರಿ ಸಂಸ್ಥೆ ಅಳವಡಿಸಿರುವ ೨ ಸಿಲಿಕಾನ್ ಚೇಂಬರ್ಗಳನ್ನು ರೋಟರಿ ರಾಜ್ಯಪಾಲ ಎ.ಆರ್. ರವೀಂದ್ರ ಭಟ್ ಉದ್ಘಾಟಿಸಿದರು.
“ಸೇವೆಯಲ್ಲ ಸಾರ್ಥಕ್ಯ ಎನ್ನುವ ಭಾವ, ಇದು ಕೊಡುಗೆಯಲ್ಲ ಕರ್ತವ್ಯ ಎನ್ನುವ ಪ್ರಜ್ಞೆ” ಘೋಷವಾಕ್ಯದ ಫಲಕ ಅನಾವರಣಗೊಳಿಸಿ ಮಾತನಾಡಿದ ರವೀಂದ್ರ ಭಟ್ ರೋಟರಿ ೩೧೮೧ ಜಿಲ್ಲೆಯು ಸಂಸ್ಕಾರ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸುಮಾರು ೭೫ ಸಿಲಿಕಾನ್ ಚೇಂಬರ್ ಗಳನ್ನು ಅಳವಡಿಸುವ ಗುರಿ ಹೊಂದ ಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮಾತನಾಡಿ, ರೋಟರಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಸಹಾಯಕ ಗವರ್ನರ್ ಅನಿಲ್ ಹೆಚ್.ಟಿ, ರೋಟರಿ ಮಡಿಕೇರಿ ಅಧ್ಯಕ್ಷ ಎನ್.ಡಿ. ಅಚ್ಚಯ್ಯ, ಮಾಜಿ ಅಧ್ಯಕ್ಷರುಗಳಾದ ರತನ್ ಕುಟ್ಟಯ್ಯ, ಮಾತಂಡ ಸುರೇಶ್ ಚಂಗಪ್ಪ, ಮೂಡ ಅಧ್ಯಕ್ಷ ರಮೇಶ್ ಹೊಳ್ಳ ಹಾಗೂ ರೋಟೆರಿಯನ್ಗಳು ಪಾಲ್ಗೊಂಡಿದ್ದರು.