ಮಡಿಕೇರಿ, ಮಾ. ೩: ಮುಂಬರಲಿರುವ ರಾಜ್ಯ ಬಜೆಟ್‌ನಲ್ಲಿ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಬೆಂಗಳೂರು ಕೊಡವ ಸಮಾಜದ ಕೆಲವು ಸದಸ್ಯರು ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಎಂ.ಎಲ್.ಸಿ. ಸುಜಾ ಕುಶಾಲಪ್ಪ ಅವರುಗಳ ಸಹಿತವಾಗಿ ಈ ಕುರಿತು ಮನವಿ ಸಲ್ಲಿಸಿ ಸಮಾಲೋಚನೆ ನಡೆಸಿದರು.
ಇತ್ತೀಚೆಗೆ ಈ ನಿಯೋಗ ಸಿ.ಎಂ. ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿತ್ತು. ತಾ. ೪ ರಂದು (ಇಂದು) ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಸರಕಾರದ ನಿಲುವು ಕುತೂಹಲಮೂಡಿಸಿದೆ. ಇವರು ಮಾತ್ರವಲ್ಲದೆ, ಇನ್ನು ಹಲವು ಸಂಘಟನೆಗಳು ಈಬಗ್ಗೆ ಸರಕಾರದ ಗಮನಸೆಳೆದಿವೆ.