ಸುಂಟಿಕೊಪ್ಪ, ಮಾ.೨: ಗರಗಂದೂರು ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಸ್ಥಾನದ ೧೫ನೇ ವರ್ಷದ ವಾರ್ಷಿಕ ಮಹೋತ್ಸವವು ತಾ.೪ ರಿಂದ ೬ ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಮೇಲ್ವಿಚಾರಕ ಶ್ರೀಧರನ್ ಸ್ವಾಮಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೭ ಗಂಟೆಗೆ ಅಭಿಷೇಕ ಪೂಜೆ, ಗಣಪತಿ ಹೋಮ ಮತ್ತು ದುರ್ಗಾಪೂಜೆ ನಡೆಯಲಿದೆ. ತಾ. ೫ ರಂದು ಸಂಜೆ ೫ ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು. ಸಂಜೆ ೭ ಗಂಟೆಯಿAದ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ ೮ ಗಂಟೆಗೆ ಶ್ರೀ ವಸೂರಿ ದೇವಿಯ ವೆಳ್ಳಾಟಂ ನಡೆಯಲಿದೆ. ತಾ. ೬ ರಂದು ಬೆಳಿಗ್ಗೆ ೮ ಗಂಟೆಯಿAದ ಮುತ್ತಪ್ಪ ತಿರುವಪ್ಪ ದೇವರ ವೆಳ್ಳಾಟಂ ಮತ್ತು ಶ್ರೀ ಪೊವ್ವಾದಿ ಭಗವತಿ ತೆಯ್ಯಂ, ಮಧ್ಯಾಹ್ನ ೧೨.೩೦ ಗಂಟೆಗೆ ಅನ್ನ ಪ್ರಸಾದ ಮತ್ತು ೧.೩೦ ರಿಂದ ಶ್ರೀ ಕುರುಂಭ ಭಗವತಿ ವೆಳಿಚ್ಚಪಾಡ್ ಕೋಮರಂ ತುಳ್ಳಲ್, ಸಂಜೆ ೬ ಗಂಟೆಗೆ ಗುರುದಿಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ.