ಸೋಮವಾರಪೇಟೆ, ಮಾ. ೨: ತಾಲೂಕಿನ ಗರ್ವಾಲೆ ಗ್ರಾಮದ ಶ್ರೀ ಬೊಟ್ಲಪ್ಪ (ಈಶ್ವರ) ದೇವಾಲಯದಲ್ಲಿ ದೇವಾಲಯ ಸಮಿತಿ ಮತ್ತು ಗ್ರಾಮಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಬೊಟ್ಲಪ್ಪ ದೇವರ ಉತ್ಸವ ಬುಧವಾರ ನಡೆಯಿತು.
ಗ್ರಾಮದ ತಕ್ಕಮುಖ್ಯಸ್ಥರ ಮನೆಯಿಂದ ಪೂಜಾ ಸಾಮಗ್ರಿಗಳೊಂದಿಗೆ ಈಶ್ವರÀ, ಸುಬ್ರಹ್ಮಣ್ಯ ಹಾಗೂ ಭಗವತಿ (ಪೊವ್ವೋದಿ) ದೇವರ ಮೂರ್ತಿಗಳನ್ನು ತಂದು ಕೋಟೆಬೆಟ್ಟದಲ್ಲಿ ಪೂಜೆ ಮಾಡಲಾಯಿತು. ಈ ಸಂದರ್ಭ ದೇವಾಲಯದ ಅಂಗಳದಲ್ಲಿ ಗರ್ವಾಲೆ ಗ್ರಾಮಸ್ಥರಿಂದ ಸಾಂಪ್ರದಾಯಿಕ ಬಿಳಿ ಕುಪ್ಪಸ ತೊಟ್ಟು ನಡೆಸಿದ ಬೊಳಕ್ಕಾಟ್ ಮನ ರಂಜಿಸಿತು.
ಕಳೆದ ಸುಮಾರು ೧೫೦೦ ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಈ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮತ್ತು ಬೇರೆ ಗ್ರಾಮದ ಗ್ರಾಮಸ್ಥರು ಸೇರಿ ಆಚರಿಸಿಕೊಂಡು ಬರಲಾಗುತ್ತಿದೆ. ಗುರುವಾರ ಬೆಳಿಗ್ಗೆ ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಲಿದೆ.