ಮಡಿಕೇರಿ, ಮಾ. ೩: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ರಬ್ಬರ್ ತೋಟಕ್ಕೆ ಬೆಂಕಿ ತಗುಲಿದ ಪರಿಣಾಮವಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ಚೆಂಬು ಗ್ರಾಮದ ಊರುಬೈಲಿನಲ್ಲಿ ಸಂಭವಿಸಿದೆ.
ಊರುಬೈಲಿನ ಲೀಲಾವತಿ ಜಯಪ್ರಕಾಶ್ ಎಂಬವರ ರಬ್ಬರ್ ತೋಟದ ಬಳಿಯಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿದ ಕಾರಣ ತರಗಲೆ, ಒಣಹುಲ್ಲುಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಸುಳ್ಯ ಅಗ್ನಿಶಾಮಕದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದೆ. ಅನೇಕ ರಬ್ಬರ್ ಗಿಡಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.