ಚೆಟ್ಟಳ್ಳಿ, ಮಾ. ೩: ಗಾಂಧಿ ಯುವಕ ಸಂಘ ಕಂಡಕರೆ ಇವರ ಆಶ್ರಯದಲ್ಲಿ ಇದೇ ರಾಷ್ಟçಮಟ್ಟದ ಸೂಪರ್ ಫೈವ್ಸ್ ಕಾಲ್ಚೆಂಡು ಪಂದ್ಯಾವಳಿ ತಾ. ೨೨ ಮತ್ತು ೨೩ ರಂದು ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಗಾಂಧಿ ಯುವಕ ಸಂಘದ ಕಾರ್ಯದರ್ಶಿ ಅಜಿನಾನ್ ಪಿ.ಎಂ ತಿಳಿಸಿದ್ದಾರೆ.
ತಾ. ೧ ಮತ್ತು ೨ ರಂದು ನಡೆಸಲು ತೀರ್ಮಾನಿಸಿದ್ದ ಫುಟ್ಬಾಲ್ ಪಂದ್ಯಾವಳಿಯನ್ನು ತಾ. ೨೨ ಮತ್ತು ೨೩ ಕ್ಕೆ ಮುಂದೂಡಲಾಗಿದೆ. ಪಂದ್ಯಾವಳಿ ೫+೨ ಜನರಿಗೆ ಸೀಮಿತವಾಗಿದ್ದು, ಮೊದಲು ನೋಂದಾಯಿಸಿದ ೩೦ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರಥಮ ಬಹುಮಾನ ೩೩,೩೩೩ ರೂ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ೨೦,೦೦೦ ರೂ. ಆಕರ್ಷಕ ಟ್ರೋಫಿ ನೀಡಲಾಗುವುದೆಂದು ಅಜಿನಾನ್ ಪಿ.ಎಂ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ೮೮೬೧೬೧೬೦೩೪, ೯೪೮೨೪೪೫೪೦೪ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.