ಸೋಮವಾರಪೇಟೆ, ಮಾ. ೩: ಬೆಂಗಳೂರಿನ ಮಲೆನಾಡು ಯೂತ್ ಅಸೋಸಿಯೇಷನ್ ವತಿಯಿಂದ ಹೆಗ್ಗಡೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕೊಡಗಿನ ತಂಡ ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದಿದೆ. ಮಿಶ್ರ ಡಬಲ್ಸ್ನಲ್ಲಿ ಸೋಮವಾರ ಪೇಟೆಯ ಧನ್ಯ ಯಡೂರು ಹಾಗೂ ಕೌಶಿಕ್ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಅಚಲ್ ರವೀಂದ್ರ ಹಾಗೂ ಯಶೋಧ ಪಡೆದಿದ್ದಾರೆ. ಪುರುಷರ ಡಬಲ್ಸ್ನಲ್ಲಿ ಲಲಿತ್ ಮತ್ತು ಸಂತೋಷ್ ಪ್ರಥಮ ಹಾಗೂ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಮತ್ತು ಕೌಶಿಕ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮಹಿಳೆಯರ ಡಬಲ್ಸ್ನಲ್ಲಿ ಜಯಶ್ರೀ ಮತ್ತು ಯಶೋಧ ಪ್ರಥಮ ಹಾಗೂ ಧನ್ಯ ಸತೀಶ್ ಮತ್ತು ಪುಷ್ಪಾಂಜಲಿ ನಾಗೇಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ೪೫ ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ನಲ್ಲಿ ಸುಧಾಕರ್ ಕುಂದಳ್ಳಿ ಮತ್ತು ಶಿವಕುಮಾರ್ ಪ್ರಥಮ ಹಾಗೂ ದಿನೇಶ್ ಮತ್ತು ತಮ್ಮೇಗೌಡ ದ್ವಿತೀಯ ಸ್ಥಾನ ಪಡೆದಿದ್ದಾರೆ. ಯೂತ್ ಅಸೋಸಿಯೇಷನ್ ಅಧ್ಯಕ್ಷ ಯಶವಂತ್ ಬೆಳ್ಳಿಗೌಡ, ಉಪಾಧ್ಯಕ್ಷ ಅರುಣ್ ಕೊತ್ನಳ್ಳಿ ಅವರುಗಳು ವಿಜೇತರಿಗೆ ಬಹುಮಾನ ವಿತರಿಸಿದರು.