ಮಡಿಕೇರಿ, ಮಾ. ೩: ನಗರದಲ್ಲಿ ನಡೆದ ಪಲ್ಸ್ ಪೋಲಿಯೋ ಅಭಿಯಾನದ ಲಸಿಕಾ ಬೂತ್‌ಗಳಿಗೆ ರೋಟರಿ ಮಡಿಕೇರಿ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಪ್ರಮುಖರು ಭೇಟಿ ನೀಡಿದ್ದರು. ಸುಮಾರು ೧೫೦ಕ್ಕೂ ಹೆಚ್ಚಿನ ಆರೋಗ್ಯ ಕಾರ್ಯಕರ್ತರಿಗೆ ಆಹಾರವನ್ನು ಒದಗಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಚೇತನ್ ಅವರಿಗೆ ಆಹಾರದ ಪೊಟ್ಟಣವನ್ನು ಹಸ್ತಾಂತರಿಸಲಾಯಿತು. ನಗರಸಭಾಧ್ಯಕ್ಷರು ಹಾಗೂ ರೋಟರಿ ಮಿಸ್ಟಿಹಿಲ್ಸ್ ಅಧ್ಯಕೆÀ್ಷ ಅನಿತಾ ಪೂವಯ್ಯ, ಮಡಿಕೇರಿ ರೋಟರಿ ಅಧ್ಯಕ್ಷ ಎನ್.ಡಿ. ಅಚ್ಚಯ್ಯ ಮತ್ತಿತರರು ಹಾಜರಿದ್ದರು.