ಮಡಿಕೇರಿ, ಫೆ. ೨೫: ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಯುವ ಕಲಾ ಸಂಘದ ವತಿಯಿಂದ ಮಾ. ೧ ರಂದು ೫ನೇ ವರ್ಷದ ಮಹಾ ಶಿವರಾತ್ರಿ ಜಾಗರಣಾ ಮಹೋತ್ಸವ ನಡೆಯಲಿದೆ.

ದೇವಾಲಯದ ಸಭಾಂಗಣದಲ್ಲಿ ಸಂಜೆ ೫.೩೦ಕ್ಕೆ ಚಂಡೆ ವಾದ್ಯ ಮೇಳದೊಂದಿಗೆ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಲಾಗುವುದು. ನಂತರ ಸಂಜೆ ೭.೩೦ ಗಂಟೆಗೆ ಜಾಗರಣಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಮುಖ್ಯ ಅತಿಥಿಗಳಾಗಿ ನೆಲ್ಲಿಹುದಿಕೇರಿ ಮುತ್ತಪ್ಪ ದೇವಾಲಯದ ಅಧ್ಯಕ್ಷ ಪಿ.ಡಿ. ಚೀಯಣ್ಣ ಪಾಲ್ಗೊಳ್ಳಲಿದ್ದಾರೆ.

ರಾತ್ರಿ ೮ ಗಂಟೆಗೆ ಚಿಂತಕಿ, ಯುವ ವಾಗ್ಮಿ ತನ್ಮಯಿ ಪ್ರೇಮ್ ಕುಮಾರ್ ಧಾರ್ಮಿಕ ಪ್ರವಚನ ನೀಡಲಿದ್ದು, ವೀರಾಜಪೇಟೆಯ ವಿಷ್ಣು ಹಾಗೂ ತಂಡದಿAದ ಟೀಮ್ ಇಂಟೋಪೀಸ್ ಡ್ಯಾನ್ಸ್ ಕ್ರೀವ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ರಾತ್ರಿ ೯ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದ್ದು, ೧೧ ಗಂಟೆಯಿAದ ಮರುದಿನ ಬೆಳಿಗ್ಗೆ ೬ ಗಂಟೆಯವರೆಗೆ ವೃತಾಚರಿಸುವ ಭಕ್ತಾದಿಗಳಿಗೆ ಲಘು ಉಪಹಾರ ಮತ್ತು ಮನರಂಜನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘದ ಆಡಳಿತ ಮಂಡಳಿ ತಿಳಿಸಿದೆ.