ಮಡಿಕೇರಿ, ಫೆ. ೨೬: ಶಿವಮೊಗ್ಗ ಜಿಲ್ಲೆಯ ಭಜರಂಗದಳದ ಪ್ರಮುಖ ಹರ್ಷ ಅವರ ಹತ್ಯೆಯ ಹಿಂದೆ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇರುವುದಾಗಿ ಆರೋಪಿಸಿದ ಬಿ.ಜೆ.ಪಿ ಪ್ರಮುಖರು ನಗರದಲ್ಲಿ ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡರು.
ನಗರದ ಕ್ರಿಸ್ಟಲ್ ಕೋರ್ಟ್ನಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಪ್ರಮುಖರು ನಗರದಲ್ಲಿ ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡರು.
ನಗರದ ಕ್ರಿಸ್ಟಲ್ ಕೋರ್ಟ್ನಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಿ.ಜೆ.ಪಿ ಪ್ರಮುಖರು, ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ರಾಜ್ಯ ಸಮಿತಿ ಸದಸ್ಯ ಮನು ಮುತ್ತಪ್ಪ, ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಸೇರಿದಂತೆ ನಗರಸಭೆಯ ಬಿ.ಜೆ.ಪಿ ಸದಸ್ಯರು ಹಾಗೂ ಬಿ.ಜೆ.ಪಿ ಪ್ರಮುಖರು ಜಮಾಯಿಸಿ ಪ್ರತಿಭಟಿಸಿದರು.