ಮಡಿಕೇರಿ, ಫೆ. ೨೬: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಚಾರ್ಟೆಡ್ ಅಕೌಂಟೆAಟ್ ಕೋರ್ಸ್ನ ಕುರಿತಾಗಿ ಮಾಹಿತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಲ್ಲಂಗಡ ಬೋಜಮ್ಮ ಹಾಗೂ ಮುಕ್ಕಾಟಿರ ನಿಧಿ ದೇವಯ್ಯ ಆಗಮಿಸಿದ್ದರು.
ಚಾರ್ಟೆಡ್ ಅಕೌಂಟೆAಟ್ ಕೋರ್ಸ್ನ ಬಗ್ಗೆ ಪರೀಕ್ಷೆಗಳ ಹಂತಗಳ ಹಾಗೂ ಅದಕ್ಕೆ ಬೇಕಾದ ಪೂರ್ವ ತಯಾರಿ ಕುರಿತು ಅವರುಗಳು ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಖಜಾಂಚಿ ಬಡುವಂಡ ಸುಬ್ರಮಣಿ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಐಕ್ಯುಎಸಿ ಸಂಚಾಲಕ ನಾಟೋಳಂಡ ನವೀನ್, ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಉಪನ್ಯಾಸಕ ನವೀನ್ ಸ್ವಾಗತಿಸಿ, ಉಪನ್ಯಾಸಕ ಹರೀಶ್ ಹಾಗೂ ಉಪನ್ಯಾಸಕಿ ಕಲ್ಪನಾ ಸಾಮ್ರಾಟ್ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ವಿಲ್ಮಾ ವಂದಿಸಿದರು.