ಮಡಿಕೇರಿ, ಫೆ. ೨೬: ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಚಿಂತನ ಪ್ರಕಾಶನ ಅಂರ್ರಾಷ್ಟಿçÃಯ ಪರೀಕ್ಷೆಗಳನ್ನು ನಡೆಸಲಾಯಿತು. ಚಿತ್ರಕಲೆ, ಗಣಿತ ಹಾಗೂ ವಿಜ್ಞಾನ ವಿಷಯಗಳಾಧಾರಿತವಾಗಿ ಪರೀಕ್ಷೆ ನಡೆಸಲಾಯಿತು. ವಿದ್ಯಾರ್ಥಿಗಳು ತಾಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಚಿAತನ ಪ್ರಕಾಶನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ೫ನೇ ತರಗತಿಯ ಆರ್ಯನ್ ಎಮ್. ಚಿತ್ರಕಲೆಯಲ್ಲಿ ಹಾಗೂ ೩ನೇ ತರಗತಿಯ ಋತಿಕಾ ಆಚಾರ್ಯ ವಿಜ್ಞಾನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ೪ನೇ ತರಗತಿಯ ಕುಶ್ಯಂತ್ ಪಿ.ವಿ. ಚಿತ್ರಕಲೆಯಲ್ಲಿ ಹಾಗೂ ಧನುಷ್ಕ ಪಿ.ಕೆ. ಗಣಿತದಲ್ಲಿ, ೧ನೇ ತರಗತಿಯ ವಿಹಾನ್ ಕೆ.ಎಂ. ವಿಜ್ಞಾನದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯು.ಕೆ.ಜಿ.ಯ ಅದ್ವಿತ್ ಚಿತ್ರಕಲೆಯಲ್ಲಿ, ೨ನೇ ತರಗತಿಯ ರಿಲ್ವಾನ್ ಎಂ.ಆರ್. ಚಿತ್ರಕಲೆಯಲ್ಲಿ, ೨ನೇ ತರಗತಿಯ ಗಗನ್ ದೀಪ್ ರೈ ಗಣಿತದಲ್ಲಿ, ೭ನೇ ತರಗತಿಯ ರಿಷಿಕಾ ಪಿ.ಜೆ. ಗಣಿತದಲ್ಲಿ ಹಾಗೂ ೬ನೇ ತರಗತಿಯ ಬಾಸುದೇವ್ ಬಾರಿಕ್ ವಿಜ್ಞಾನದಲ್ಲಿ ಆಯ್ಕೆಗೊಂಡಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ತಾ. ೨೪ರಂದು ಪ್ರಶಸ್ತಿ ಪತ್ರದೊಂದಿಗೆ ಆಯ್ಕೆಯಾದ ಹಂತಕ್ಕೆ ಅನುಗುಣವಾಗಿ ಪದಕವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತ ಪ್ರೀತು ಅವರು ವಿತರಿಸಿದರು.