ಕೂಡಿಗೆ, ಫೆ. ೨೬: ಉಕ್ರೇನ್‌ನ ಕಾರ್ಕಿವ್ ನಗರದಲ್ಲಿ ಸಿಲುಕಿರುವ ಕೂಡಿಗೆಯ ವಿದ್ಯಾರ್ಥಿನಿ ಅಕ್ಷಿತಾ ರಕ್ಷಣೆಗೆ ಪೋಷಕರು ಮನವಿ ಮಾಡಿದ್ದಾರೆ.

ಕೂಡಿಗೆಯ ರಮೇಶ್ ಅವರ ಪುತ್ರಿ ಅಕ್ಷಿತಾ ಕಾರ್ಕಿವ್‌ನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು ಇದೀಗ ಅಲ್ಲಿನ ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲ್ಕು ದಿನಕ್ಕಾಗುವಷ್ಟು ಆಹಾರ ಇಟ್ಟುಕೊಂಡಿರುವ ಸ್ನೇಹಿತರೊಂದಿಗೆ ಇರುವ ಅಕ್ಷಿತಾ ಅಲ್ಲಿನ ಸಂಕಷ್ಟದ ಬಗ್ಗೆ ವೀಡಿಯೋ ಮಾಡಿ ಪೋಷಕರಿಗೆ ಕಳುಹಿಸಿ ತನ್ನ ಅಳಲು ತೋಡಿಕೊಂಡಿದ್ದು ಮಗಳನ್ನು ನೆನೆದು ಪೋಷಕರು ಕಂಗಾಲಾಗಿದ್ದಾರೆ.

ಮಗಳನ್ನು ಕರೆತರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ರಾಜತಾಂತ್ರಿಕ ಮಾತುಕತೆ ಮೂಲಕ ಶೀಘ್ರವಾಗಿ ಮಗಳನ್ನು ಕರೆತರಲು ಪೋಷಕರು ಒತ್ತಾಯಿಸಿದ್ದಾರೆ.