ಚೆಯ್ಯಂಡಾಣೆ, ಫೆ. ೨೬: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ನೆರೆಯ ಶಾಲೆಯಲ್ಲಿ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಆಗಿರುವ ಅನ್ನಂಬಿರ ಟಿ.ಸುಬ್ರಮಣಿ ಹಾಗೂ ಬಿದ್ದಂಡ ರಾಜ ಉತ್ತಪ್ಪ ನವರನ್ನು ನರಿಯಂದಡ ಕೇಂದ್ರ ಪ್ರೌಢಶಾಲೆಯ ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ ವರ್ಗದವರಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಮನೋಹರ್ ನಾಯ್ಕ. ಆರ್.ವಹಿಸಿದ್ದರು. ಸ್ವಾಗತವನ್ನು ಬಿ.ಪಿ. ಸುನೀತಾ, ಸನ್ಮಾನಿತರ ಪರಿಚಯವನ್ನು ಪಿ.ಬಿ.ಪೊನ್ನಪ್ಪ ಹಾಗೂ ಎಚ್.ಕೆ.ರಾಜಕುಮಾರ್ ನಿರ್ವಹಿಸಿದರು. ವಂದನಾರ್ಪಣೆಯನ್ನು ಕೆ. ಡಿ. ಹೇಮಮಾಲಿನಿ ಹಾಗೂ ನಿರೂಪಣೆಯನ್ನು ರವೀಂದ್ರನಾಥ್ ಬಿ.ಬಿ. ಅವರು ನೆರವೇರಿಸಿದರು.

ಸನ್ಮಾನಿತರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು. ತಾವು ಓದಿದ ಶಾಲೆಯ ಮೇಲಿನ ಅಭಿಮಾನ ಇಟ್ಟು ಸನ್ಮಾನಿತರು ತಲಾ ೫ ಸಾವಿರ ರೂಪಾಯಿಯನ್ನು ವಿದ್ಯಾರ್ಥಿ ನಿಧಿಗೆ ದಾನವಾಗಿ ನೀಡಿರುತ್ತಾರೆ.