ಶನಿವಾರಸಂತೆ, ಫೆ. ೨೬: ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆ ಸುತ್ತಮುತ್ತ ನಗರ, ಗ್ರಾಮಗಳಲ್ಲಿ ಇತ್ತೀಚೆಗೆ ಅಂತರ ರಾಜ್ಯ ಕಾರ್ಮಿಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದು, ಕಾರ್ಮಿಕರು ಹೆಚ್ಚಾಗಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

ಸುತ್ತಮುತ್ತಲ ತೋಟಗಳು, ಹೊಟೇಲ್‌ಗಳು, ಕಾರ್ಖಾನೆಗಳು, ಕಾಫಿ ಗೋದಾಮು, ಅಂಗಡಿಗಳಲ್ಲಿ ಗಾರೆ ಕೆಲಸ ಮಾಡುತ್ತಿರುವ, ಹೊರರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗ ತಪ್ಪದೆ ಸಂಬAಧಪಟ್ಟ ಗುರುತಿನ ಚೀಟಿ, ಭಾವಚಿತ್ರ, ಮೊಬೈಲ್ ಸಂಖ್ಯೆ ಸಂಗ್ರಹಿಸಿ ಸಾರ್ವಜನಿಕರು, ಮಾಲೀಕರುಗಳು ಶನಿವಾರಸಂತೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು. ಯಾರಾದರೂ ಮಾಹಿತಿ ನೀಡದೆ ಗೌಪ್ಯವಾಗಿಟ್ಟರೆ ಅಪರಾಧ ಕೃತ್ಯ ನಡೆದರೆ ಸಂಬAಧಿಸಿದ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಅಪರಾಧ ಸಿಬ್ಬಂದಿಗಳಾದ ಲೋಕೇಶ್, ಮುರುಳಿ ಎಲ್ಲಾ ಕಡೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸೂಚನೆಯೊಂದಿಗೆ ಮನವಿ ಮಾಡಿದ್ದಾರೆ.