ಚೆಟ್ಟಳ್ಳಿ, ಫೆ. ೨೫: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಅಧೀನದ ಸೋಮವಾರಪೇಟೆ ಡಿವಿಷನ್ ಸಮಿತಿಯ ವಾರ್ಷಿಕ ಕೌನ್ಸಿಲ್ ಕುಶಾಲನಗರದ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.

ಡಿವಿಷನ್ ಅಧ್ಯಕ್ಷ ಕಮರುದ್ದೀನ್ ಅನ್ವಾರಿ ಅಸ್ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸನ್ ಫೈಝಿ ಉಸ್ತಾದರ ದುಆ ನಡೆಸಿದರು. ರಾಜ್ಯ ಎಸ್ಸೆಸ್ಸೆಫ್ ನಾಯಕ ಅಝೀಝ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.

ಡಿವಿಷನ್ ಉಸ್ತುವಾರಿ ಮುಜೀಬ್ ಮಾಸ್ಟರ್ ಅವರ ನೇತೃತ್ವದಲ್ಲಿ ನವ ಸಾರಥಿಗಳನ್ನು ಘೋಷಣೆ ಮಾಡಲಾಯಿತು. ಅಧ್ಯಕ್ಷರಾಗಿ ಶಾಫಿ ಅನ್ವಾರಿ ಅಸ್ಸಖಾಫಿ, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಕ್ ಕರ್ಕಳ್ಳಿ, ಕೋಶಾಧಿಕಾರಿಯಾಗಿ ಜಲೀಲ್ ಹೊಸತೋಟ ಹಾಗೂ ಉಪಸಮಿತಿ ಕಾರ್ಯದರ್ಶಿಗಳಾಗಿ ನಜ್ಮುದ್ದೀನ್ ಝುಹ್ರಿ, ಹುಸೈನ್ ಸಖಾಫಿ ಹೊಸತೋಟ, ಆರಿಫ್ ಸಖಾಫಿ, ನಿಹಾದ್ ಕುಶಾಲನಗರ, ರಶೀದ್ ಹೊಸಕೋಟೆ, ಅಬೂಬಕ್ಕರ್ ಸುಂಟಿಕೊಪ್ಪ, ಶಿಬಿಲಿ ಕಲ್ಕಂದೂರು, ಮನ್ಸೂರ್ ಕಾಗಡಿಕಟ್ಟೆ ಹಾಗೂ ೧೦ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಶಾಫಿ ಸಅದಿ, ಜಿಲ್ಲಾ ಕೋಶಾಧಿಕಾರಿ ರಹೀಂ ಹೊಸತೋಟ, ಎಸ್.ವೈ.ಎಸ್. ನಾಯಕರಾದ ಹುಸೈನ್ ಕುಶಾಲನಗರ, ಹಸೈನಾರ್ ಹೊಸಕೋಟೆ, ರಫೀಕ್, ಲತೀಫ್, ಇಬ್ರಾಹಿಂ ಮಾಸ್ಟರ್, ಹನೀಫ್, ಅಶ್ರಫಿ ಹಾಗೂ ಸೆಕ್ಟರ್‌ನಿಂದ ಆಯ್ಕೆಯಾದ ಪ್ರತಿನಿಧಿಗಳು ಭಾಗವಹಿಸಿದ್ದರು. ಡಿವಿಷನ್ ಕಾರ್ಯದರ್ಶಿ ಸ್ವಾದಿಕ್ ಸ್ವಾಗತಿಸಿ, ಜಲೀಲ್ ಹೊಸತೋಟ ವಂದಿಸಿದರು.