ಚೆಟ್ಟಳ್ಳಿ: ರಾಜರಕಾಲದ ಇತಿಹಾಸ ವನ್ನು ಸಾರುವ ನಂಜರಾಯಪಟ್ಟಣ ದಲ್ಲಿ ಅಯ್ಯಂಡ್ರ ಕುಟುಂಬದ ಹಿರಿಯರ ಶ್ರಮ ಹಾಗೂ ಗ್ರಾಮಸ್ಥರ ಸಹಕಾರದ ಫಲವಾಗಿ ೧೯೭೧ರಲ್ಲಿ ಪ್ರಾರಂಭವಾದ ನಂಜರಾಯಪಟ್ಟಣ ಪ್ರೌಢಶಾಲೆ ೫೦ ವರ್ಷಗಳು ಪೂರೈಸಿದ್ದು, ಸುವರ್ಣ ಮಹೋತ್ಸವಕ್ಕೆ ಸಿದ್ಧವಾಗುತ್ತಿದೆ.

ಸ್ವಾತಂತ್ರö್ಯ ನಂತರದ ಪ್ರೌಢಶಾಲಾ ಶಿಕ್ಷಣ ಕೇವಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿರುವುದನ್ನು ಮನಗಂಡ ಕೊಡಗಿನ ವಿದ್ಯಾಭಿಮಾನಿಗಳು ಜಿಲ್ಲೆಯಾದ್ಯಂತ ಪ್ರೌಢಶಾಲೆಗಳನ್ನು ಗ್ರಾಮೀಣ ಹಂತದಲ್ಲಿ ಪ್ರಾರಂಭಿಸಲು ತೀರ್ಮಾನಿಸಿದರು. ಅದೇ ರೀತಿ ನಂಜರಾಯಪಟ್ಟಣ ಗ್ರಾಮದಲ್ಲಿ ಚೇರಳ ಶ್ರೀಮಂಗಲದ ಅಯ್ಯಂಡ್ರ ಕುಟುಂಬಸ್ಥರು ದೂರದೃಷ್ಠಿಯ ಚಿಂತನೆಯೊAದಿಗೆ ಗ್ರಾಮಸ್ಥರ ಸಹಕಾರ ಪಡೆದು ೧೯೭೧ರಲ್ಲಿ ನಂಜರಾಯಪಟ್ಟಣ ವಿದ್ಯಾಸಂಘದ ಅಡಿಯಲ್ಲಿ ನಂಜರಾಯಪಟ್ಟಣ ಪ್ರೌಢಶಾಲೆಯನ್ನು ಪ್ರಾರಂಭಿಸಿದರು.

ಅಯ್ಯಂಡ್ರ ಕುಟುಂಬದ ದಿವಂಗತ ಬೆಳ್ಳಿಯಪ್ಪ ಅವರು ದಿಟ್ಟನಿರ್ಧಾರ ತೆಗೆದುಕೊಂಡು ಊರಿಗೊಂದು ದವಸ ಭಂಡಾರ ನಿರ್ಮಿಸಿ ಹಾಗೂ ಹಣ ಸಂಗ್ರಹಿಸಿ ನಂಜರಾಯಪಟ್ಟಣ ಸಮೀಪದ ಗ್ರಾಮಗಳ ಪ್ರಮುಖರಾದ ಕರ್ಣಯ್ಯನ ಚಿನ್ನಪ್ಪ, ಅಂದಾನಪ್ಪ, ನಡುಮನೆ ಮುತ್ತಣ್ಣ ಹಾಗೂ ಕರಡಿಗೋಡಿನ ಮಿತ್ತೂರು ಸೋಮಯ್ಯ ಅವರ ಸಹಕಾರದಿಂದ ೧೯೭೧ ರಲ್ಲಿ ಪ್ರೌಢಶಾಲೆಯನ್ನು ಪ್ರಾರಂಭಿಸಿದರು.

ಪ್ರಾರAಭದಲ್ಲಿ ೪೮ ವಿದ್ಯಾರ್ಥಿಗಳು ಪ್ರವೇಶ ಪಡೆದು ಇದುವರೆಗೆ ೩,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿತಿದ್ದಾರೆೆ. ಸೈನಕರಾದಿಯಾಗಿ ಉನ್ನತಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವರು ಕೃಷಿಕರಾಗಿ, ವ್ಯಾಪಾರಸ್ಥರಾಗಿ ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ತಂದೆ, ತಾಯಿ ಮಕ್ಕಳು ಒಂದೇ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿರುವ ಉದಾಹರಣೆಗಳೂ ಬಹಳಷ್ಟಿದ್ದು, ಶಾಲೆಗೊಂದು ಹೆಮ್ಮೆಯೇ ಸರಿ.

ಶಾಲೆಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಶಾಲೆಯ ಸ್ಥಾಪನೆಗೆ ದುಡಿದವರಿಗೆ ಸನ್ಮಾನಿಸಿ ಗೌರವಿಸು ವುದು, ಸ್ಮರಣಸಂಚಿಕೆ, ಶಾಲಾ ಕೊಠಡಿ ನವೀಕರಣ, ಕಂಪ್ಯೂಟರೀಕರಣ, ಆಟದ ಮೈದಾನ ಮತ್ತು ಗ್ಯಾಲರಿ, ಅಂಕಣಸುತ್ತ ಕಾಂಪೌAಡ್ ನಿರ್ಮಾಣ, ಪೀಠೋಪಕರಣ ನವೀಕರಣ, ಸ್ಮಾರ್ಟ್ಕ್ಲಾಸ್ ಅಳವಡಿಕೆ, ಗ್ರಂಥಾಲಯ ಅಭಿವೃದ್ಧಿ, ಮಂದಿರ ನಿರ್ಮಾಣ ಕಾರ್ಯವನ್ನು ಮುಂದಿಟ್ಟುಕೊAಡು ಕಾರ್ಯಕ್ರಮ ನಡೆಸಲು ಸಿದ್ಧತೆಗಳಾಗಿವೆ.

ಕಳೆದ ಡಿಸೆಂಬರ್ ೧೨ ರಂದು ವಿದ್ಯಾಸಂಘದ ಅಧ್ಯಕ್ಷ ಕೆ.ಎಸ್.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಹಿರಿಯರ ಸಮ್ಮುಖದಲ್ಲಿ ಸಭೆ ನಡೆದಿದ್ದು, ಕೆಲವೇ ತಿಂಗಳುಗಳಲ್ಲಿ ಮಹೋತ್ಸವ ಆಚರಣೆ ಮಾಡಲು ತೀರ್ಮಾನಿಸಲಾಯಿತು. ಇಂದಿನವರೆಗೆ ೬೦೦ ಹಳೆ ವಿದ್ಯಾರ್ಥಿಗಳು ಸದಸ್ಯತ್ವ ಪಡೆದಿದ್ದಾರೆ. ಹಲವು ಮಹನೀಯರ ಸಲಹೆ ಸೂಚನೆಗಳನ್ನು ಪಡೆಯಲಾಗಿದ್ದು ಹಳೆ ವಿದ್ಯಾರ್ಥಿಗಳೊಳ ಗೊಂಡAತೆ ಸಂಘದ ರಚನೆ ಹಾಗೂ ಹಲವು ಉಪಸಮಿತಿಗಳನ್ನು ಸ್ಥಾಪಿಸುವ ಮೂಲಕ ಸುವರ್ಣ ಮಹೋತ್ಸವದ ಕಾರ್ಯಕ್ರಮ ನಡೆಯಲಿದೆ.

-ಪುತ್ತರಿರ ಕರುಣ್‌ಕಾಳಯ್ಯ

ಚೆಟ್ಟಳ್ಳಿ.