ಮಡಿಕೇರಿ, ಫೆ. ೨೫: ಮಡಿಕೇರಿ ತಾಲೂಕು ಕಡಗದಾಳು ಗ್ರಾಮದಲ್ಲಿರುವ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿಯ ವಾರ್ಷಿಕ ಮಹಾಪೂಜೆ ಮಾರ್ಚ್ ೧ ಹಾಗೂ ೨ ರಂದು ನಡೆಯಲಿದೆ.

ಮಾರ್ಚ್ ೧ ರಂದು ರಾತ್ರಿ ಜಾಗರಣೆ, ವಿವಿಧ ಪೂಜಾ ಕೈಂಕರ್ಯಗಳು, ಮಹಾಪೂಜೆ ನಡೆಯಲಿದೆ. ಮಾರ್ಚ್ ೨ ರಂದು ಬೆಳಿಗ್ಗೆ ೧೦ ಗಂಟೆಯಿAದ ಪೂಜಾ ಕಾರ್ಯಕ್ರಮ ಆರಂಭಗೊAಡು, ಮಧ್ಯಾಹ್ನ ಮಹಾ ಮಂಗಳಾರತಿ, ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.