ವೀರಾಜಪೇಟೆ, ಫೆ. ೨೪: ಮಾತೃಭಾಷೆಯು ದೌರ್ಭಾಗ್ಯದ ಸಂಕೇತ ಅಲ್ಲ, ಅದು ನಮ್ಮ ಆಸ್ತಿ ಹಾಗೂ ಅದನ್ನು ಅಳಿವಿನಂಚಿಗೆ ತರದಂತೆ ನಾವು ತಡೆಯಬೇಕು ಎಂದು ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಶ್ರೀಶೈಲ ಬೀಳಗಿ ಹೇಳಿದರು. ನಗರದ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ “ಅಂರ‍್ರಾಷ್ಟಿçÃಯ ಮಾತೃ ಭಾಷಾದಿನ’’ದ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು.

ಪ್ರಾಂಶುಪಾಲೆ ಡಾ. ವಾಣಿ ಎಂ., ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಾಹಿತ್ಯ ಸಂಘದ ಸಂಚಾಲಕಿ ಸಹಾಯಕ ಪ್ರಾಧ್ಯಾಪಕಿ ಸುಜಾತ ಪ್ರಾಸ್ತಾವಿಕ ನುಡಿಯಾಡುತ ಮಾತೃಭಾಷೆಯ ಔಚಿತ್ಯ ಹಾಗೂ ಅನಿವಾರ್ಯತೆಯನ್ನು ವಿವರಿಸಿದರು. ಸಹಾಯಕ ಪ್ರಾಧ್ಯಾಪಕಿ ಮಿನಿ ಕೆ. ಜೆ ಮಾತೃಭಾಷೆಯು ಹೇಗೆ ನಮ್ಮ ಅಂತರಾಳದ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುತ್ತದೆ. ಕಿಟಲ್ ರವರು ಕನ್ನಡ ಭಾಷೆಗೆ ನೀಡಿದ ಕೊಡುಗೆಯನ್ನು ವಿವರಿಸಿ ಭಾಷೆ ಹಾಗೂ ಭಾವಕ್ಕೆ ಇರುವ ವ್ಯತ್ಯಾಸವನ್ನು ವಿವರಿಸಿದರು. ಪ್ರಾಂಶುಪಾಲರಾದ ಡಾ. ಎಂ. ವಾಣಿ ಮಾತನಾಡಿದರು.

ಸಮಾರಂಭದಲ್ಲಿ ಆಡಳಿತ ಮಂಡಳಿಯ ಕೋಶಾಧಿಕಾರಿ ವಾಸಂತಿ ಕೆ. ಹಾಗೂ ಎಲ್ಲಾ ಬೋಧಕ, ಬೋಧಕೇತರ ವರ್ಗದವರು ಹಾಜರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳ ನಡೆದವು. ವಿನುತಾ ಪ್ರಾರ್ಥಿಸಿ, ಅಕ್ಷತಾ ಹಾಗೂ ದೀಪ್ತಿ ನಿರೂಪಿಸಿ, ಸುಮಲತಾ ಸ್ವಾಗತಿಸಿ, ತಶ್ವಿ ವಂದಿಸಿದರು.