ಮಡಿಕೇರಿ ಫೆ.೨೩ : ಮೈಸೂರು ರಂಗಾಯಣ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗಡಿಯಲ್ಲಿ ಕನ್ನಡ ನಾಟಕ ಎಂಬ ಹೆಸರಿನಲ್ಲಿ ‘ಕೃಷ್ಣೇಗೌಡನ ಆನೆ' ನಾಟಕ ಪ್ರದರ್ಶನವು ತಾ. ೨೮ ರಂದು ಸಂಜೆ ೫.೩೦ ಗಂಟೆಗೆ ಪೊನ್ನಂಪೇಟೆಯ ಹಿರಿಯ ಪ್ರಾಥಮಿಕ ಪಬ್ಲಿಕ್ ಶಾಲೆಯ ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಲಿದೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸP ಕೆ.ಜಿ.ಬೋಪಯ್ಯ ಅವರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಎಸ್.ಕುಶಾಲಪ್ಪ ಮತ್ತು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಇತರರು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಸಂಜೆ ೬.೩೦ ಗಂಟೆಗೆ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ಆರ್.ನಾಗೇಶ್ ನಿರ್ದೇಶನದ 'ಕೃಷ್ಣೇಗೌಡನ ಆನೆ' ನಾಟಕವನ್ನು ರಂಗಾಯಣದ ಕಿರಿಯ ರೆಪರ್ಟರಿ ಕಲಾವಿದರು ಅಭಿನಯಿಸಲಿದ್ದಾರೆ. ಇದರೊಂದಿಗೆ ರಂಗಾಯಣದ ಕಲಾವಿದರಿಂದ ರಂಗಸAಗೀತ ಕಾರ್ಯಕ್ರಮ ನಡೆಯಲಿದೆ.