ಮಡಿಕೇರಿ, ಫೆ. ೨೨: ಭಾರತೀಯ ರಿಸರ್ವ್ ಬ್ಯಾಂಕ್ ೨೦೧೮ ರಿಂದ ಪ್ರತಿ ವರ್ಷ ಆರ್ಥಿಕ ಸಾಕ್ಷರತಾ ಸಪ್ತಾಹ ವನ್ನು ದೇಶಾದ್ಯಂತ ಆಚರಿಸಿಕೊಂಡು ಬರುತ್ತಿದ್ದು, ಪ್ರಸ್ತುತ ವರ್ಷ ತಾ. ೧೪ ರಿಂದ ೧೮ರ ವರೆಗೆ ಆಚರಿಸಲಾಯಿತು. ಈ ವರ್ಷದ ಧ್ಯೇಯವಾಕ್ಯ ‘ಡಿಜಿಟಲ್ ಬಳಸಿ ಸುರಕ್ಷತೆ ಯೊಂದಿಗೆ’ ಆಗಿದ್ದು, ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹದ ದಿನವನ್ನು ಆಚರಿಸಲಾಯಿತು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಅವರು ಮಾತನಾಡಿ, ಜೀವನದ ಬಹುತೇಕ ಎಲ್ಲ ವಲಯಗಳೂ ಈಗ ಡಿಜಿಟಲೀ ಕರಣಗೊಂಡಿವೆ. ಇದಕ್ಕೆ ಬ್ಯಾಂಕಿAಗ್ ಕ್ಷೇತ್ರವೇನೂ ಹೊರತಾಗಿಲ್ಲ. ಈ ಬದಲಾವಣೆಯು ಹೊಸಬರಿಗೆ ಅವಕಾಶಗಳನ್ನು ತೆರೆದುಕೊಡುವ ಜತೆಗೆ ಮುಕ್ತ ಸವಾಲುಗಳನ್ನು ಸಹ ಒಡ್ಡಿದೆ. ಬ್ಯಾಂಕಿAಗ್ ಕ್ಷೇತ್ರದ ಕೆಲವು ಅಡ್ಡಿ ಆತಂಕಗಳನ್ನು ಹೊಡೆದೋಡಿ ಸಲು ಇದರಿಂದ ಸಾಧ್ಯವಾಗಿದೆ. ಜತೆಗೆ, ಚುರುಕುತನಕ್ಕೆ ಹೊಂದಿಕೊಳ್ಳುವುದಕ್ಕೂ ಇದು ಅವಕಾಶ ನೀಡಿದೆ ಎಂದು ಸಭೆಗೆ ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ಸೆಲ್ವ ಕುಮಾರ್ ಯು. ಮಾತನಾಡಿ, ಸರ್ಕಾರ ಸಾರ್ವಜನಿಕರಿ ಗಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ಡಿಜಿಟಲ್ ತಂತ್ರಜ್ಞಾನದಲ್ಲಿ ಬ್ಯಾಂಕ್ ಸೇವೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು ಮಹತ್ವ ಪಡೆದಿವೆ. ಜನರು ಇವುಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಬ್ಯಾಂಕ್ ಖಾತೆಯಲ್ಲಿ ಯಾವುದೇ ಶಂಕಾಸ್ಪದ ವಹಿವಾಟು ನಡೆದಿದೆ ಎಂದು ಅನಿಸಿದರೆ ಕೂಡಲೇ ಬ್ಯಾಂಕ್ ಗಮನಕ್ಕೆ ತನ್ನಿ. ದೂರು ಕೊಡುವುದು ತಡವಾದರೆ ನಷ್ಟಕ್ಕೆ ನೀವೇ ಹೊಣೆಗಾರ ರಾಗುವ ಸಾಧ್ಯತೆ ಇರುತ್ತದೆ ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಕ್ಷೇತ್ರೀಯ ವ್ಯವಸ್ಥಾಪಕ ಚಿಕ್ಕರಂಗಯ್ಯ ಅವರು ಮಾತನಾಡಿ, ನೋಟು ರದ್ಧತಿ ಕ್ರಮದ ನಂತರ ದೇಶದಲ್ಲಿ ‘ಡಿಜಿಟಲ್ ಬ್ಯಾಂಕಿAಗ್’ ಒಮ್ಮೆಲೇ ಮುನ್ನೆಲೆಗೆ ಬಂದಿದೆ. ಇದು ಭಾರತದ ಜನಸಾಮಾನ್ಯರು ಮತ್ತು ವರ್ತಕರು ಪಾವತಿ ಮಾಡುವ ಅಥವಾ ವಹಿವಾಟು ನಡೆಸುವ ವಿಧಾನವನ್ನೇ ಬದಲಿಸಿದೆ. ನೋಟು ರದ್ದತಿಯ ಬಳಿಕ ದೇಶದಲ್ಲಿ ನಡೆಯುತ್ತಿದ್ದ ಡಿಜಿಟಲ್ ವಹಿವಾಟುಗಳ ಪ್ರಮಾಣ ಶೇ. ೭೫ ರಷ್ಟು ಏರಿಕೆಯಾಗಿ, ನಗದು ಬಳಕೆಯ ಪ್ರಮಾಣ ಗಮನಾರ್ಹವಾಗಿ ತಗ್ಗಿದೆ ಎಂದು ಸಭೆಗೆ ತಿಳಿಸಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ದಿನೇಶ್ ಪೈ ಅವರು ಮಾತನಾಡಿ, ಏರುತ್ತಿರುವ ಸೈಬರ್ ಕ್ರೆöÊಂ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು. ಜಿ. ಪಂ. ಯೋಜನಾ ವ್ಯವಸ್ಥಾಪಕ ಶ್ರೀಕಂಠ ಮೂರ್ತಿ ಅವರು ಮಾತನಾಡಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಸಮಗ್ರ ಮಾಹಿತಿಯನ್ನು ಸಭೆಗೆ ತಿಳಿಸಿದರು.
ವೆಬಿನಾರ್ ಮುಖಾಂತರ ಆರ್.ಬಿ.ಐ.ನ ಉಪ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟೇಶ್ ಗೋಪಾಲ್, ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಸಮಗ್ರ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ವಿವಿಧ ಬ್ಯಾಂಕುಗಳ ಪ್ರಾದೇಶಿಕ ಕಾರ್ಯಾಲಯದ ಪ್ರತಿನಿಧಿಗಳು, ಬ್ಯಾಂಕುಗಳ ಪ್ರತಿನಿಧಿಗಳು ಕಾಲೇಜಿನ ವಿದ್ಯಾರ್ಥಿಗಳು, ರೈತರು, ಸ್ವ-ಸಹಾಯ ಸಂಘದ ಸದಸ್ಯರು ಮತ್ತು ನವ್ಯೋದ್ಯಮದ ಆಸಕ್ತರು ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಂವಾದ ನಡೆಸಲಾಯಿತು ಮತ್ತು ಹಲವಾರು ಸಂದೇಹಗಳಿಗೆ ಉತ್ತರಿಸಲಾಯಿತು. ಲೀಡ್ ಬ್ಯಾಂಕ್ ವ್ಯವಸ್ಥಾಪಕರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.