ವೀರಾಜಪೇಟೆ, ಫೆ. ೨೨: ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್‌ಗಳ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವು ದರೊಂದಿಗೆ ಆದಾಯವನ್ನು ಹೆಚ್ಚಿಸಿ ಕೊಂಡು ಅಭಿವೃದ್ಧಿ ಹೊಂದುವAತಾಗ ಬೇಕು ಎಂದು ವೀರಾಜಪೇಟೆ ಯೂನಿಯನ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಮಂಜುನಾಥ್ ಹೇಳಿದರು.

ಓಡಿಪಿ ಸಂಸ್ಥೆ ಮೈಸೂರು, ಅಂದೇರಿ ಹಿಲ್ಪೆ ಜರ್ಮನಿ ಹಾಗೂ ನಬಾರ್ಡ್ ಯೋಜನೆಯ ಸಹಯೋಗ ದೊಂದಿಗೆ ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಓಡಿಪಿ ಸಂಸ್ಥೆಯ ಆಯ್ದ ಸದಸ್ಯರಿಗೆ ಬ್ಯಾಂಕ್‌ನಿAದ ಸಿಗುವ ಸೌಲಭ್ಯಗಳ ಸದುಪಯೋಗ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಸಂಘಟನೆಗಳಿಗೆ ಹಸು, ಹಂದಿ ಸಾಕಾಣೆ, ಜೇನು ಕೃಷಿಗಳು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಬ್ಯಾಂಕ್ ಮೂಲಕ ಸಾಲ ನೀಡಲಾಗುವುದು. ಮಹಿಳಾ ಸಂಘಗಳು ಉಳಿತಾಯದ ಹಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಮೂಲಕ ಪಡೆದ ಸಾಲವನ್ನು ಪಾವತಿ ಮಾಡಿದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಬ್ಯಾಂಕ್ ಸಹಕಾರ ನೀಡುವುದಾಗಿ ತಿಳಿಸಿದರು.

ಓಡಿಪಿ ಸಂಸ್ಥೆಯ ವಲಯ ಸಂಯೋಜಕ ಮೈಸೂರಿನ ಜಾನ್ ಬಿ. ರಾಡ್ರಿಗಾಸ್ ಮಾತನಾಡಿ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ೨ ಸಾವಿರ ಹಳ್ಳಿಗಳಲ್ಲಿ ೪೦ ಸಾವಿರ ಓಡಿಪಿ ಸಂಸ್ಥೆಯ ಸದಸ್ಯರಿದ್ದು ಅವರ ಸಮಗ್ರ ಅಭಿವೃದ್ಧಿಗೆ ಸ್ಪಂದಿಸುತ್ತಿದ್ದೇವೆ. ಕೋವಿಡ್ ಸಂದರ್ಭ ಸಂಕಷ್ಟದಲ್ಲಿರುವ ಸದಸ್ಯರಿಗೆ ಆಹಾರ ಸಾಮಗ್ರಿಗಳ ಕಿಟ್ ಮತ್ತು ಧನಸಹಾಯ ನೀಡಲಾಗಿದ್ದು, ಮುಂದಿನ ದಿನದಲ್ಲಿ ಅಣಭೆ ಬೇಸಾಯ ಹಾಗೂ ಜೇನು ಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಪಟ್ಟಣದ ಅರಸುನಗರ ಅಂಗನ ವಾಡಿ ಕಾರ್ಯಕರ್ತೆ ಮಂಜುಳಾ ಮಾತನಾಡಿ, ಪ್ರಧಾನಮಂತ್ರಿ ಯೋಜನೆಯಿಂದ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಗರ್ಭಿಣಿಯರಿಗೆ ಹಾಗೂ ಬಾಣಂತಿ ಯರಿಗೆ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಮತ್ತು ಮಕ್ಕಳ ಬೆಳವಣಿಗೆ ಗಾಗಿ ಅಂಗನವಾಡಿ ಮೂಲಕ ಉಚಿತ ಆಹಾರ ಧಾನ್ಯವನ್ನು ವಿತರಿಸ ಲಾಗುತ್ತಿದ್ದು, ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಎಂದರು

ವಲಯ ಸಂಯೋಜಕ ಜಾಯ್ಸಿ ಮೇನೆಜಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸದಸ್ಯರುಗಳು ಸರ್ಕಾರದ ಸೌಲಭ್ಯಗಳನ್ನು ಸದುಪ ಯೋಗಪಡಿಸಿಕೊಳ್ಳುವಂತಾಗಬೇಕು ಎಂದರು. ವೇದಿಕೆಯಲ್ಲಿ ಓಡಿಪಿ ಸದಸ್ಯೆ ರೇಷ್ಮ, ಕಾರ್ಯಕರ್ತರಾದ ರೀಟಾ ಜೋಸೆಫ್, ಬಿ.ಆರ್. ಅನಿಲ್ ಕುಮಾರ್ ಉಪಸ್ಥಿತರಿದ್ದರು. ತಾಲೂಕಿನ ಕೆದಮುಳ್ಳೂರು, ಬೋಯಿಕೇರಿ, ಪೆರುಂಬಾಡಿ, ಕಲ್ಲುಬಾಣೆ, ಹೆಗ್ಗಳ ಗ್ರಾಮಗಳಿಂದಲು ಓಡಿಪಿ ಸಂಸ್ಥೆಯ ಸದಸ್ಯರುಗಳು ಭಾಗವಹಿಸಿದ್ದರು.