ಮಡಿಕೇರಿ ಫೆ. ೨೨: ಕೊಡಗು ಜಿಲ್ಲಾ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಉಸ್ತುವಾರಿ ಸಚಿವರ ಕೆ.ಡಿ.ಪಿ ತ್ರೆöÊಮಾಸಿಕ ಸಭೆಗೆ ನಾಮನಿರ್ದೇಶನ ಗೊಂಡ ಸದಸ್ಯ ವಿ.ಕೆ. ಲೋಕೇಶ್ ಹಾಗೂ ಮಡಿಕೇರಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಕೆ.ವಿ. ಸುಬ್ರಮಣಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಸಮಿತಿಯ ಕಚೇರಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಟಿ.ಕೆ. ಸುಧೀರ್, ಗೌರವಾಧ್ಯಕ್ಷ ಕೆ.ಎಸ್. ರಮೇಶ್, ಪ್ರಧಾನ ಕಾರ್ಯದರ್ಶಿ ಪಿ.ಕೆ. ಶಶಿಕುಮಾರ್, ಖಜಾಂಚಿ ಕೆ. ಬಾಬು, ಸಲಹೆಗಾರ ಟಿ.ಆರ್. ವಾಸುದೇವ್, ವಿನೂಪ್, ಶರತ್‌ಕಾಂತ್, ಅಜಿಶ ಕುಮಾರ್ ಹಾಗೂ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ, ಚೆಟ್ಟಳ್ಳಿ, ಮರಗೋಡು, ಮೂರ್ನಾಡು, ಸುಂಟಿಕೊಪ್ಪ, ಗೋಣಿಕೊಪ್ಪ, ಅಮ್ಮತ್ತಿ ಒಂಟಿ ಅಂಗಡಿ, ನಂಜರಾಯಪಟ್ಟಣ ಸಮಾಜಗಳ ಅಧ್ಯಕ್ಷರು, ಸದಸ್ಯರು, ಮಹಿಳಾ ಸದಸ್ಯರು, ಉಪಸ್ಥಿತರಿದ್ದರು. ದೀಪ್ತಿ ಧರ್ಮೇಂದ್ರ ಪ್ರಾರ್ಥಿಸಿ, ಶಶಿಕುಮಾರ್ ಸ್ವಾಗತಿಸಿ, ಕೆ.ಬಾಬು ವಂದಿಸಿದರು.