ಶನಿವಾರಸಂತೆ, ಫೆ. ೧೯: ಸಮೀಪದ ಗೌಡಳ್ಳಿ ಗ್ರಾಮದ ಶ್ರೀ ನವದುರ್ಗ ಪರಮೇಶ್ವರಿ ದೇವಾಲಯ ಸಮಿತಿ ವತಿಯಿಂದ ಜಾತ್ರೆ ಪ್ರಯುಕ್ತ ತಾ. ೨೭ ಮತ್ತು ೨೮ ರಂದು ಮುಕ್ತ ಫುಟ್ಬಾಲ್, ಥ್ರೋಬಾಲ್ ಹಾಗೂ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ತಂಡದ ನೋಂದಣಿ ಫುಟ್ಬಾಲ್, ಥ್ರೋಬಾಲ್ ಪಂದ್ಯಕ್ಕೆ ತಾ. ೨೬ ರಂದು ೪ ಗಂಟೆಯವರೆಗೆ, ಪ್ರವೇಶ ಶುಲ್ಕ ಕ್ರಮವಾಗಿ ರೂ. ೨ ಸಾವಿರ, ರೂ. ೧ ಸಾವಿರ. ಗುಡ್ಡಗಾಡು ಓಟ ತಾ. ೨೮ ರಂದು ಬೆಳಿಗ್ಗೆ ೮ ರಿಂದ ಆರಂಭವಾಗಲಿದೆ. ಮಾಹಿತಿಗಾಗಿ ಸುಮಂತ್ ೯೪೮೦೮೫೩೫೩೭, ಗುರುಪ್ರಸಾದ್ ೯೯೭೨೬೩೨೧೦೯ ಸಂಪರ್ಕಿಸಬಹುದು ಎಂದು ದೇವಾಲಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಬಿ.ಪಿ. ಮೊಗಪ್ಪ, ಕಾರ್ಯದರ್ಶಿ ವಿಶ್ವರೂಪ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.