ಮಡಿಕೇರಿ, ಫೆ. ೧೯: ಅಂತರರಾಷ್ಟಿçÃಯ ಮಾತೃಭಾಷಾ ದಿನದ ಅಂಗವಾಗಿ ತಾ. ೨೧ ರಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ವಿವಿಧ ಹಕ್ಕೋತ್ತಾಯ ಈಡೇರಿಕೆಗೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂವಿಧಾನದ ೮ನೇ ಶೆಡ್ಯೂಲ್ನಲ್ಲಿ ಕೊಡವ ಭಾಷೆಯನ್ನು ಸೇರಿಸಬೇಕು. ರಾಜ್ಯ ಮರು-ಸಂಘಟನೆ ಕಾಯಿದೆ ೧೯೫೬ರ ಅಡಿಯಲ್ಲಿ ಸಂವಿಧಾನದ ೭ನೇ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ವಿಷಯಕ್ಕಾಗಿ ಒತ್ತಾಯಿಸುವುದು ಮತ್ತು ಸಂವಿಧಾನದ ೩೪೭, ೩೫೦, ೩೫೦ಎ, ೩೫೦ಬಿ ವಿಧಿಗಳ ಕಾರ್ಯಗಳನ್ನು ತ್ವರಿತಗೊಳಿಸುವುದು. ಅದರಂತೆ ಕೊಡವ ಭಾಷೆಯನ್ನು ಕೊಡಗಿನ ಆಡಳಿತ ಭಾಷೆಯಾಗಿ ಮತ್ತು ಕೊಂಕಣಿ ಭಾಷೆಗೆ ಸಮಾನ ವಾಗಿ ರಾಜ್ಯದ ೩ನೇ ಭಾಷೆಯಾಗಿ ಅಳವಡಿಸಬೇಕು. ಪ್ರಾಥಮಿಕ ಹಂತ ದಿಂದ ಸ್ನಾತಕೋತ್ತರ ಪದವಿವರೆಗೆ ಕಡ್ಡಾಯ ವಿಷಯವಾಗಿ ಕೊಡವ ಭಾಷೆಯನ್ನು ಬೋಧನಾ ಮಾಧ್ಯಮ ವಾಗಿ ಪರಿಗಣಿಸಬೇಕು. ಪ್ರಸಾರ ಭಾರತಿ ಅಡಿಯಲ್ಲಿ ದೂರದರ್ಶನದಲ್ಲಿ ಮತ್ತು ಬಿಬಿಸಿಯಲ್ಲಿ ಕೊಡವ ಭಾಷೆ ನ್ಯೂಸ್ ಬುಲೆಟಿನ್, ಕೊಡವ ಜಾನಪದ ಸಾಂಸ್ಕöÈತಿಕ ಲಕ್ಷಣಗಳನ್ನು ಪ್ರದರ್ಶಿಸಲು ನಿಯಮಿತವಾಗಿ ಪ್ರಸಾರ ಮಾಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿಡಲಾಗುವುದು ಎಂದು ಹೇಳಿದ್ದಾರೆ.