ಕೊಡವರ ಮೂಲ ಪರಂಪರೆಯ ಆಚಾರ, ವಿಚಾರ, ಭಾಷೆ, ಪದ್ಧತಿ, ಪರಂಪರೆಯ ಜೊತೆಗೆ ಕೊಡವ ಆಟ್‌ಪಾಟನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಕೊಡಗಿನ ಉತ್ಸಾಹಿ ಕೊಡವ ಯುವಕ ಹಾಗೂ ಯುವತಿಯರ ತಂಡವೊAದು ಸಂಘಟನೆಯೊAದನ್ನು ಹುಟ್ಟುಹಾಕಿತು. ಅದೇ ಮುಂದೆ ಕೊಡವ ವiಕ್ಕಡ ಕೂಟವಾಗಿ ಬೆಳೆದು ಇದೀಗ ದಶಕದ ಸಂಭ್ರಮದಲ್ಲಿದೆ. ಕಳೆದ ಒಂಬತ್ತು ವರ್ಷದ ಹಿಂದೆ ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಸಾರಥ್ಯದಲ್ಲಿ ೨೦೧೩ರ ಫೆಬ್ರವರಿ ೧೮ ರಂದು ಪ್ರಾರಂಭವಾದ ಕೊಡವ ಮಕ್ಕಡ ಕೂಟ ಕಾನೂನಾತ್ಮಕವಾಗಿ ನೋಂದಾವಣಿಗೊಳ್ಳುವ ಮೂಲಕ ಪ್ರಾರಂಭಗೊAಡಿತು. ಮಡಿಕೇರಿ ಕೊಡವ ಸಮಾಜದಲ್ಲಿ ನಡೆದ ಮೊದಲ ಸಭೆಯಲ್ಲಿ ಬೊಳ್ಳಜಿರ ಬಿ. ಅಯ್ಯಪ್ಪ, ಬಾಳೆಯಡ ಪ್ರತೀಶ್ ಪೂವಯ್ಯ, ಅಮ್ಮಾಟಂಡ ಮೇದಪ್ಪ, ಟ್ರಸ್ಟಿಗಳಾಗಿ ಕೂಟವನ್ನು ಮುನ್ನಡೆಸಲು ಜವಾಬ್ದಾರಿ ಹೊತ್ತರು. ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿ ಬೊಳ್ಳಜಿರ ಬಿ. ಅಯ್ಯಪ್ಪ, ಉಪಾಧ್ಯಕ್ಷರಾಗಿ ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಚೆಪ್ಪುಡೀರ ರಾಖೇಶ್ ದೇವಯ್ಯ, ಖಜಾಂಚಿ ಅಮ್ಮಾಟಂಡ ಮೇದಪ್ಪ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿ ಕೇಲೇಟಿರ ದೇವಯ್ಯ, ನಿರ್ದೆಶಕರಾಗಿ ಪೊನ್ನೊಲತಂಡ ವಿನೋದ್, ಮಡ್ಲಂಡ ಮೋನೀಶ್ ಸುಬ್ಬಯ್ಯ, ಚೊಟ್ಟೆಯಂಡ ಕಾರ್ಸನ್ ಮುತ್ತಪ್ಪ, ಪುತ್ತರಿರ ಶಿವು ನಂಜಪ್ಪ, ಮಹಿಳಾ ನಿರ್ದೇಶಕರಾಗಿ ಬಾಳೆಯಡ ದಿವ್ಯಾ ಮಂದಪ್ಪ, ಉದಿಯಂಡ ಜಯಂತಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಸದಸ್ಯತ್ವ ಹಣ ಹಾಗೂ ದೇಣಿಗೆ ಪಡೆಯದೆÀಯೇ ಹಲವು ಸಾಮಾಜಿಕ ಕಾರ್ಯಗಳನ್ನು ಈ ಕೂಟ ನಡೆಸುತ್ತಾ ಬರುತ್ತಿರುವುದೇ ಈ ಕೂಟದ ಮತ್ತೊಂದು ವಿಶೇಷ.

ಕೊಡವ ಜನಾಂಗದ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಪದ್ಧತಿ, ಪರಂಪರೆ, ಆಚಾರ, ವಿಚಾರವನ್ನು ಕಲಿಸುವ ಹತ್ತು ಹಲವು ಉದ್ದೇಶ ಹೊತ್ತು ಕಳೆದ ಒಂಬತ್ತು ವರ್ಷಗಳಿಂದ ಮಡಿಕೇರಿ, ನಾಪೋಕ್ಲು ಹಲವೆಡೆ ಆಟ್‌ಪಾಟ್ ಪಡಿಪು ಶಿಬಿರದಡಿ ಮಕ್ಕಳಿಗೆ ಕೋಲಾಟ್, ಕತ್ತಿಯಾಟ್, ಪರೆಕಳಿ, ಬೊಳಕಾಟ್, ಸಂಬAಧ ಅಡ್‌ಕ್‌ವ, ದುಡಿಕೊಟ್, ಜೊತೆಗೆ ಹೆಣ್ಣು ಮಕ್ಕಳಿಗೆ ಉಮ್ಮತಾಟ್ ತರಬೇತಿಯನ್ನು ನೀಡುವ ಮೂಲಕ ಯುವ ಪೀಳಿಗೆಯಲ್ಲಿ ಕೊಡವ ಸಂಸ್ಕೃತಿಯ ಜಾಗೃತಿ ಹಾಗೂ ಆಸಕ್ತಿಯನ್ನು ಬೆಳೆಸುತ್ತಾ ಬರುತ್ತಿದೆ. ಕೊಡವರ ಪವಿತ್ರ ಗ್ರಂಥ ಪಟ್ಟೋಳೆ ಪಳಮೆಯನ್ನು ಕೊಡವ ಮಕ್ಕಳಿಗೆ ಕೂಟವು ನೀಡುತ್ತಾ ಬರುತ್ತಿದೆ. ಕೊಡವ ವiಕ್ಕಡ ಕೂಟದ ಕಾರ್ಯವನ್ನು ಮೆಚ್ಚಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡವ ಸಂಸ್ಕೃತಿಯದ್ಯೋತಕವಾದ ದುಡಿಯನ್ನು ಕೊಡವ ವiಕ್ಕಡ ಕೂಟಕ್ಕೆ ನೀಡಿ ಪ್ರೋತ್ಸಾಹಿಸಿದೆ. ಅಲ್ಲದೆ ಕೊಡವ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕೊಡಗಿನ ಹಲವೆಡೆ ಕುಂಞÂಯಡ ಕೊಡವ ಜಾನಪದ ಸಾಂಸ್ಕೃತಿಕ ನಮ್ಮೆ ನಡೆಸಿದ ಯಶಸ್ಸು ಕೂಟದ್ದು.

ಈ ಹಿಂದೆ ಕೊಡಗಿನ ನೆಲದಲ್ಲಿ ತಮ್ಮ ಸಾಧನೆಯ ಮೂಲಕ ತಾಯಿನಾಡಿನ ಕೀರ್ತಿ ಪತಾಕೆಯನ್ನು ಏರಿಸಿ ಅಜರಾಮರರಾಗಿರುವ ಕೊಂಗAಡ ಗಣಪತಿ, ಹರದಾಸ ಅಪ್ಪಚ್ಚಕವಿ, ದಾನಿ ಕೊರವಂಡ ನಂಜಪ್ಪ, ಸ್ವಾತಂತ್ರö್ಯ ಹೋರಾಟಗಾರ ಕೊಡಗಿನ ಗಾಂಧಿ ಎಂದೇ ಬಿರುದು ಪಡೆದ ಪಂದ್ಯAಡ ಬೆಳ್ಯಪ್ಪನವರ ನಾಮಫಲಕವನ್ನು ಪುನರ್ ಪ್ರತಿಷ್ಠಾಪಿಸುವ ಕಾರ್ಯವನ್ನು ಕೊಡವ ಮಕ್ಕಡ ಕೂಟ ಮಾಡಿದೆ. ದೇಶ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಶತ್ರುಗಳೊಡನೆ ಎದೆಕೊಟ್ಟು ಹೋರಾಡಿ ಪ್ರಾಣತೆತ್ತ ಅಪ್ರತಿಮ ವೀರ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ನೆನಪು ಕೊಡಗಿನಲ್ಲಿ ಅಜರಾಮರ ಉಳಿಯಲು ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಕಳೆದ ವರ್ಷ ಅಜ್ಜಮಾಡ ಕುಟುಂಬದ ಸಹಕಾರದೊಂದಿಗೆ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿ ಪ್ರತಿ ವರ್ಷ ದೇವಯ್ಯ ಅವರ ಹುಟ್ಟಿದ ಹಾಗೂ ವೀರ ಮರಣವನ್ನಪ್ಪಿದ ದಿನವನ್ನು ಕೊಡಗಿನ ವೀರ ಯೋಧರು ನಿವೃತ್ತ ಸೇನಾನಿಗಳೊಂದಿಗೆ ಆಚರಿಸಲಾಗುತ್ತಿದೆ. ಬ್ರಿಟೀಷ್ ಸರಕಾರದಿಂದಲೇ ಬಳುವಳಿಯಾಗಿ ಬಂದ ಕೊಡವ ಬೈರೇಸ್ ಅನ್ವಯ ಪ್ರತಿಯೊಬ್ಬ ಕೊಡವನಿಗೂ ಬಂದೂಕು ಹೊಂದುವ ವಿನಾಯಿತಿ ಹಕ್ಕನ್ನು ಪಡೆಯಲು ಅವಕಾಶವಿದ್ದರೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಗುತ್ತಿರುವ ತೊಂದರೆಯ ಬಗ್ಗೆ ಹೋರಾಟ ನಡೆಸಿದೆ. ಕೊಡವ ಮಕ್ಕಡ ಕೂಟವು ಕೊಡವ ಕುಟುಂಬಗಳ ನಡುವಿನ ಪೈಪೋಟಿ ಕಾರ್ಯಕ್ರಮವಾದ ಉಮ್ಮತ್‌ಬೊಳಕ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕುಂಞÂಯಡ ಜನಪದ ಸಾಂಸ್ಕೃತಿಕ ನಮ್ಮೆಯನ್ನು ನಾಪೋಕ್ಲುವಿನಲ್ಲಿ ಎರಡು ವರ್ಷ, ಮಡಿಕೇರಿ ಹಾಗೂ ಪೊನ್ನಂಪೇಟೆಯಲ್ಲಿ ಆಚರಿಸಿದೆ. ಕೊಡಗಿನ ಹತ್ತು ಹಲವು ಸಾಧಕರಿಗೆ ಕೊಡವ ಮಕ್ಕಡ ಕೂಟ ಸನ್ಮಾನಿಸಿ, ಗೌರವಿಸುವ ಕಾರ್ಯವನ್ನು ಮಾಡಿದೆ.

ಕೊಡವರ ಹೊಸ ವರ್ಷ ಎಡಮ್ಯಾರ್ ಒಂದನ್ನು ದಕ್ಷಿಣ ಕೊಡಗಿನಿಂದ ಹಿಡಿದು ಉತ್ತರ ಕೊಡಗಿನ ಹಲವೆಡೆ ಕೊಡವ ಸಂಸ್ಕೃತಿಯ ಆಚರಣೆಯಂತೆ ಗದ್ದೆಗಳಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಎತ್ತು ಕಟ್ಟಿ ಉಳುಮೆ ಮಾಡಿ ಹಲವು ಕುಟುಂಬದ ಐನ್‌ಮನೆಗಳಲ್ಲಿ ಎಡಮ್ಯಾರ್ ಒಂದನ್ನು ಆಚರಿಸುವ ಮೂಲಕ ದಿನದ ವಿಶೇಷತೆಯ ಬಗ್ಗೆ ಅರಿವನ್ನು ಮೂಡಿಸುತ್ತಾ ಬರುತ್ತಿದೆ. ಅಕ್ಟೋಬರ್ ೧೭ರ ಕಾವೇರಿ ಚಂಗ್ರಾAದಿಯAದು ಕೊಡಗಿನ ಕುಲ ದೇವರ ಮೂಲನೆಲೆ ತಲಕಾವೇರಿಯಲ್ಲಿ ನಡೆಯುವ ತೀರ್ಥೋದ್ಭವದಂದು ಕೊಡವ ಮಕ್ಕಡ ಕೂಟವು ಹÀಲವು ವರ್ಷಗಳಿಂದ ಕಾವೇರಿ ಚಂಗ್ರಾAದಿ ಯಾತ್ರೆಯಡಿ ಹಲವು ಸಂಘ-ಸAಸ್ಥೆಯೊAದಿಗೆ ಕೊಡವ ಉಡುಪಿನಲ್ಲಿ ಹಿರಿಯರೊಂದಿಗೆ ದುಡಿಕೊಟ್ಟು ಹಾಡಿನೊಂದಿಗೆ ಕುಲದೇವಿ ಕಾವೇರಿಯ ಸನ್ನಿಧಿಗೆ ತೆರಳಿ ತೀರ್ಥ ರೂಪಿಣಿಯಾಗಿ ಬರುವವರೆಗೆ ದುಡಿಕೊಟ್ಟು ಹಾಡಿನೊಂದಿಗೆ ಕುಲದೇವಿಯನ್ನು ಸ್ತುತಿಸಲಾಗುತ್ತಿದೆ.

ಕೊಡವ ಜನಾಂಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹಲವು ಹೋರಾಟಗಳನ್ನು ಮಾಡಲಾಗಿದ್ದು, ಕೂಟದ ಪ್ರತಿಯೊಂದು ಹೋರಾಟಕ್ಕೂ ಫಲ ದೊರೆತಿದೆ. ಕೊಡವ ಮಕ್ಕಡ ಕೂಟವು ಕೊಡವ ಸಂಸ್ಕೃತಿ, ಆಚಾರ, ವಿಚಾರಕ್ಕೆ ಸಂಬAಧಿಸಿದ ಬರಹಗಳೆಲ್ಲ ದಾಖಲೆಪಡಿಸಲು ಹೊರಟಿದ್ದು ಕೊಡವ, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಚರ್ತುರ್ ಭಾಷೆಗಳಲ್ಲಿ ಪ್ರಕಟಗೊಂಡ ಏಕೈಕ ಸಂಘಟನೆಯಾಗಿದ್ದು ಆಟ್‌ಪಾಟ್ ಪುಸ್ತಕ (ನಾಲ್ಕನೇ ಮುದ್ರಣ), ೧೯೬೫ ಯುದ್ಧ ಹಾಗೂ ಕೊಡಗಿನ ಮಹಾವೀರ (ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ), ಕೊಡವರು ಹಾಗೂ ಕಾವೇರಿ, ಮಹಾವೀರ ಅಚ್ಚುತನಾಯಕ, ಕೊಡಗಿನ ಗಾಂಧಿ ಪಂದ್ಯAಡ ಐ. ಬೆಳ್ಯಪ್ಪ, ೧೯೬೫ ಯುದ್ಧ ಹಾಗೂ ಕೊಡಗಿನ ಮಹಾವೀರ, ಕುಂಞÂಪುಟ್ಟ್ನಲ್ಲಿ, ದಿವಾನ್ ಚೆಪ್ಪುಡೀರ ಪೊನ್ನಪ್ಪ, ಕೊಡವ ಕ್ರೀಡಾ ಕಲಿಗಳು, ಅಪ್ಪಚ್ಚ ಕವಿರ ನೆಪ್ಪು, ೧೭೮೫ ಅooಡಿg (ಖಿiಠಿಠಿu’s ಆಚಿiಡಿಥಿ), ಏoಜಚಿgu ಠಿಡಿiಟಿಛಿiಠಿಚಿಟiಣಥಿ ಗಿ/s ಃಡಿiಣish ಇmiಠಿiಡಿe, ಖಿhe ಒಚಿರಿoಡಿ ತಿho ಞeಠಿಣ his ಛಿooಟ (ಲೆ.ಕ. ಪುಟ್ಟಿಚಂಡ ಎಸ್. ಗಣಪತಿ) ಕೊಡವ ಭಾಷೆಯಲ್ಲಿ ಕೊಡಗ್‌ರ ಸಂಗೀತ ಸಾಹಿತ್ಯ ಕಲಾವಿದಂಗ ಕನ್ನಡದಲ್ಲಿ ಕೊಡಗಿನ ಸಂಗೀತ ಸಾಹಿತ್ಯ ಕಲಾವಿದರು ತರ್ಜುಮೆ ಮಾಡಲಾಗಿದೆ. ಈವರೆಗೆ ೫೧ ಪುಸ್ತಕಗಳನ್ನು ದಾನಿಗಳ ಸಹಾಯಹಸ್ತದಿಂದ ಬಿಡುಗಡೆ ಗೊಳಿಸಲಾಗಿದ್ದು, ಇನ್ನು ೩ ಪುಸ್ತಕಗಳು ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಕೂಟ ಪ್ರಕಟಿತ ೮ ಪುಸ್ತಕಗಳಿಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಆಯ್ಕೆಗೊಂಡಿದೆ. ಕೊಡವ ಮಕ್ಕಡ ಕೂಟ ಬಿಡುಗಡೆಗೊಳಿಸಿರುವ ಕೊಡಗಿನ ವೀರಯೋಧನೊಬ್ಬನ ಕಥೆ ಆಧಾರಿತÀ ಕೊಡಗ್‌ರ ಸಿಪಾಯಿ ಕಾದಂಬರಿ ಚಲನಚಿತ್ರವಾಗಿ ಜನಮನ್ನಣೆಗೆ ಪಾತ್ರವಾಗಿದೆ. ನಾಡಪೆದ ಆಶಾ ಕಾದಂಬರಿಯೂ ಕೂಡ ಕೊಡವ ಚಲನಚಿತ್ರವಾಗಿ ರೂಪುಗೊಂಡು ಜನ್ನಮನ್ನಣೆಗೆ ಪಾತ್ರವಾಗಿ ಚಲನಚಿತ್ರೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿದೆ. ನಿವೃತ್ತ ಯೋಧ ಚಲನಚಿತ್ರ ನಿರ್ದೇಶಕ ಕೊಟ್ಟ್ಕತ್ತಿರ ಪ್ರಕಾಶ್ ಕಾರ್ಯಪ್ಪ ಬರೆದ ಕೊಡವ ಮಕ್ಕಡ ಕೂಟ ಬಿಡುಗಡೆಗೊಳಿಸಿರುವ ವಿಧಿರ ಕಳಿಲ್ ಕಾದಂಬರಿ ಚಲನಚಿತ್ರಕ್ಕೆ ಸಿದ್ಧಗೊಳ್ಳುತ್ತಿದೆ.

ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರ ಸಂಘಟನೆಯ ಸೇವೆಯನ್ನು ಗುರುತಿಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೂತನವಾಗಿ ಸ್ಥಾಪನೆಗೊಂಡ ಕೊಡವ ಅಧ್ಯಯನ ಪೀಠದ ಸಮಿತಿಯ ಸದಸ್ಯನಾಗಿ ಆಯ್ಕೆ ಮಾಡಿದ್ದಾರೆ. ಈ ಕೊಡವ ಮಕ್ಕಡ ಕೂಟ ಹಲವು ಸಂಘಟನೆಯೊAದಿಗೆ ಕೈಜೋಡಿಸಿ ಕೊಡವ ಸಂಸ್ಕೃತಿ, ಆಚಾರ, ವಿಚಾರ, ಭಾಷೆ, ಪದ್ಧತಿ ಪರಂಪರೆಯ ಉಳಿವಿಗಾಗಿ ಶ್ರಮಿಸುತ್ತಾ ದಶಮಾನದತ್ತ ಹೆಜ್ಜೆಯಿರಿಸಿರುವುದು ಹೆಮ್ಮೆಯ ವಿಷಯ.

- ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ