ಮಡಿಕೇರಿ, ಫೆ. ೧೮: ಜಿಲ್ಲೆಯ ಆರ್ಥಿಕತೆಯ ಪ್ರಮುಖ ಅಂಶವಾಗಿರುವ ಕಾಫಿ ಬೆಳೆಯ ಕೆಲಸ ಕಾರ್ಯಗಳ ಪರ್ವ ಕಾಲವಿದು... ಪ್ರಸಕ್ತ ಸಾಲಿನ ಫಸಲನ್ನು ಕುಯಿಲು ಮಾಡುವುದು, ಒಣಗಿಸುವುದು, ಪಲ್ಪಿಂಗ್ನAತಹ ಕೆಲಸಗಳು ಒಂದೆಡೆಯಾದರೆ, ತೋಟ ಕಪಾತು, ಮರ ಕಪಾತುವಿನಂತಹ ಕೆಲಸಗಳು ಇದರೊಂದಿಗೆ ಬಹು ಅಗತ್ಯವಾಗಿರುವ ಕಾಫಿ ಹೂಮಳೆಗಾಗಿನ ನಿರೀಕ್ಷೆ ಮತ್ತೊಂದೆಡೆಯಾಗಿದೆ. ಹಲವಾರು ಬೆಳೆಗಾರರು ಈಗಾಗಲೇ ತಮ್ಮ ತೋಟದ ಕೆಲಸಗಳನ್ನು ಪೂರೈಸಿದ್ದು, ಇದೀಗ ತೋಟಕ್ಕೆ ನೀರು ಹಾಯಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಜಿಲ್ಲೆಯ ಹಲವೆಡೆ ಕಾಫಿ ತೋಟಗಳಲ್ಲಿ ಹೂಗಳು ಅರಳಿದ್ದು, ಕಾಫಿಯ ಹೂವಿನ ಪರಿಮಳ ಕಂಡುಬರುತ್ತಿದೆ. ನದಿ, ಕೆರೆ, ತೋಡುವಿನಂತಹ ನೀರಿನ ಸೌಲಭ್ಯ ಇರುವ ಬೆಳೆಗಾರರು ಇದನ್ನು ಬಳಸಿಕೊಂಡು ತೋಟಕ್ಕೆ ನೀರು ಹಾಯಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ತಡವಾದಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಆತಂಕದಿAದ ಈ ಕೆಲಸ ಬಿರುಸುಗೊಳ್ಳುತ್ತಿದೆ. ಆದರೆ, ನೀರು ಹಾಯಿಸಲು ಸೌಕರ್ಯ ಇಲ್ಲದಿರುವ ಮಂದಿ ವರುಣನ ಕೃಪೆಯನ್ನೇ ಕಾಯಬೇಕಿದೆ. ಕಾಫಿ ಕುಯಿಲಿನ ಕೆಲಸ ಪೂರೈಸಿಕೊಂಡಿರುವ ಮಂದಿ ಮಳೆಯ ನಿರೀಕ್ಷೆಯಲ್ಲಿದ್ದರೆ, ಕೆಲವರು ಸಮಸ್ಯೆಗಳಿಂದ ಕಾಫಿ ಕುಯಿಲು ಮಾಡಲು ಸಂಕಷ್ಟ ಎದುರಿಸುತ್ತಿರುವವರು ವರ್ಷದ ಫಸಲನ್ನು ಸುಭದ್ರ ಮಾಡಿಕೊಳ್ಳಲು ಪರಿತಪಿಸುತ್ತಿರುವುದು ಜಿಲ್ಲೆಯ ಪ್ರಸ್ತುತದ ವಿದ್ಯಮಾನವಾಗಿದೆ.
ಇದೀಗ ಕೆಲವು ದಿನಗಳಿಂದ ಆಗಾಗ್ಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ಮಳೆಹನಿಯ ಸಿಂಚನವೂ ಆಗಿದೆ. ಆದರೆ, ಎಲ್ಲೂ ದೊಡ್ಡ ಪ್ರಮಾಣದಲ್ಲಿ ಮಳೆ ಈತನಕ ಬಿದ್ದಿಲ್ಲ. ಆಗಾಗ್ಗೆ ಒಂದೆರಡು ಹನಿಗಳ ಸಿಂಚನವಷ್ಟೇ ಆಗಿದೆ. ಕಳೆದ ವರ್ಷ ವಾತಾವರಣದಲ್ಲಿನ ಅಸಹಜತೆಯ ಪರಿಣಾಮವಾಗಿ ಅಗತ್ಯಕ್ಕೂ ಮುನ್ನವೇ ಜನವರಿ ತಿಂಗಳಿನಿAದಲೇ ಜಿಲ್ಲೆಯಲ್ಲಿ ಮಳೆ ಸುರಿದಿತ್ತು. ಇದು ಅಕಾಲಿಕ ಮಳೆಯಾದರೂ, ಬೆಳೆಗಾರರಿಗೆ ಒಂದು ರೀತಿಯಲ್ಲಿ ವರದಾನವೂ ಆಗಿ ಪರಿಣಮಿಸಿತ್ತು. ಜನವರಿ ೨೦ರ ಬಳಿಕ ಮಾರ್ಚ್ ಅಂತ್ಯದವರೆಗೂ ಇಡೀ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದ್ದು, ಕಳೆದ ಸಾಲಿನಲ್ಲಿ ಬೆಳೆಗಾರರು ನೀರು ಹಾಯಿಸುವ ಸಂಕಷ್ಟದಿAದ ಪಾರಾಗಿದ್ದರು. ಆಗಾಗ್ಗೆ ಸುರಿದ ಮಳೆ ವರದಾನವಾದಂತಾದರೂ ಕೆಲವು ಸಮಸ್ಯೆಗಳನ್ನು ನಂತರದಲ್ಲಿ ಸೃಷ್ಟಿಸಿದರೂ ಪ್ರಯೋಜನ ಹೆಚ್ಚಿತ್ತು. ಈ ವರ್ಷ ಈಗಾಗಲೇ ಫೆಬ್ರವರಿ ಎರಡನೇ ವಾರ ಮುಗಿದಿದ್ದು, ಮಾರ್ಚ್ ತಿಂಗಳು ಸಮೀಪಿಸುತ್ತಿದೆ. ಆದರೆ, ಜಿಲ್ಲೆಯ ಯಾವ ಭಾಗಕ್ಕೂ ಮಳೆಯಾಗಿಲ್ಲ. ಮೊನ್ನೆದಿನ ಮಾಂದಲ್ಪಟ್ಟಿಯಲ್ಲಿ ಒಂದಷ್ಟು ಹೆಚ್ಚು ಮಳೆ ಸುರಿದಿರುವ ಕುರಿತು ವರದಿಯಾಗಿದೆ. ತೋಟದ ಪಸಲಿನ ಕೆಲಸ -ಕಾರ್ಯಗಳು ಮುಕ್ತಾಯವಾದ ಹಂತ ತಲುಪುತ್ತಿದ್ದು, ಮಳೆ ಮೋಡವೂ ತೂಗುಯ್ಯಾಲೆಯಾಡುತ್ತಿದೆ. ಇದೀಗ ಜಿಲ್ಲೆ ಹಾಗೂ ಕಾಫಿ ಬೆಳೆಗಾರರು ಪ್ರಥಮ ಹೂ ಮಳೆಯ ನಿರೀಕ್ಷೆಯಲ್ಲಿದ್ದಾರೆ.