ಮಡಿಕೇರಿ, ಫೆ. ೧೮: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ೨೦೨೧-೨೨ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಪ್ರವರ್ಗ-೧ ರ ೬(ಎ) ಯಿಂದ ೬(ಎಕೆ) ವರೆಗೆ ಬರುವ ಬೆಸ್ತ, ಅಂಬಿಗ, ಅಂಬಿ, ಗಂಗಾಮತ, ಕಬ್ಬಲಿಗ, ಕೋಲಿ, ಮೊಗವೀರ ಮತ್ತು ಇದರ ಉಪ ಜಾತಿಗಳಿಗೆ ಒಳಪಡುವ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಕನಿಷ್ಟ ೧ ಎಕರೆ ಜಮೀನು ಹೊಂದಿದ್ದು, ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಇರುವ ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು. ವಾರ್ಷಿಕ ವರಮಾನ ರೂ. ೯೮ ಸಾವಿರಗಳ ಮಿತಿಯಲ್ಲಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಟ ೧೮ ವರ್ಷ ಹಾಗೂ ಗರಿಷ್ಠ ೫೫ ವರ್ಷಗಳ ಮಿತಿಯೊಳಗಿರಬೇಕು. ವೈಯಕ್ತಿಕ ನೀರಾವರಿ ಕೊಳವೆ ಬಾವಿಗಳಿಗೆ ಘಟಕ ವೆಚ್ಚ ರೂ. ೨.೨೫ ಲಕ್ಷಗಳ ಸಹಾಯಧನ ನಿಗದಿಪಡಿಸಲಾಗಿದೆ.
ನಿಗಮದ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿದಾರರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್, ಜಮೀನಿನ ಆರ್ಟಿಸಿ, ಸ್ಕೆಚ್, ಕುಟುಂಬದ ವಂಶ ವೃಕ್ಷ, ಸಣ್ಣ ಅಥವಾ ಅತೀ ಸಣ್ಣ ರೈತರ ಪತ್ರ, ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಸೌಲಭ್ಯ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರಾಡ್ರಿಗಸ್ ಕಟ್ಟಡದ ಎದುರು, ರೇಸ್ ಕೋರ್ಸ್ ರಸ್ತೆ, ಮಡಿಕೇರಿ ಅಥವಾ ನಿಗಮದ ವೆಬ್ಸೈಟ್ hಣಣಠಿs://ಚಿmbigಚಿಡಿಚಿಜeveಟoಠಿmeಟಿಣ.ಞಚಿಡಿಟಿಚಿಣಚಿಞ.gov.iಟಿ ನಲ್ಲಿ ವಿವರ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್ ೧೦ ರ ಸಂಜೆ ೫ ಗಂಟೆಯೊಳಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ದೂ. ೦೮೨೭೨-೨೨೧೬೫೬ ನ್ನು ಸಂಪರ್ಕಿಸಬಹುದು ಎಂದು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಗೃಹ ರಕ್ಷಕ ದಳದ ಗೌರವ ಸಮಾದೇಷ್ಟರ ಹುದ್ದೆಗೆ
ಗೃಹ ರಕ್ಷಕ ದಳವು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ಗೃಹರಕ್ಷಕ ದಳದ ಕಚೇರಿಗಳು ರಾಜ್ಯದ ೩೧ ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕಾರ್ಯನಿರತವಾಗಿವೆ ಹಾಗೂ ಈ ಗೃಹ ರಕ್ಷಕ ದಳದ ಜಿಲ್ಲಾ ಕಚೇರಿಯಲ್ಲಿನ ಆಡಳಿತ ನಿರ್ವಹಣೆಯನ್ನು ನೋಡಿಕೊಳ್ಳಲು ಸ್ಥಳೀಯ ಗೌರವಾನ್ವಿತ ವ್ಯಕ್ತಿಗಳನ್ನು ಸರ್ಕಾರವು ಗೃಹ ರಕ್ಷಕ ದಳದ ಸಮಾದೇಷ್ಟರುಗಳನ್ನಾಗಿ ನಿಯಮಾನುಸಾರ ನೇಮಕ ಮಾಡುತ್ತಿದೆ.
ಮಡಿಕೇರಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಗೃಹ ರಕ್ಷಕ ದಳದ ಗೌರವ ಸಮಾದೇಷ್ಟರ ಹುದ್ದೆಯು ಖಾಲಿಯಾಗಿರುವುದರಿಂದ ಈ ಹುದ್ದೆಗೆ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಿ ಅರ್ಹತೆ ಆಧಾರದ ಮೇಲೆ ತುಂಬಬೇಕಿದ್ದು, ಇಚ್ಛೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಚ್ಛೆಯುಳ್ಳ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾರ್ಚ್ ೧೧ ರೊಳಗೆ ಸಲ್ಲಿಸಬಹುದು ಎಂದು ಪೌರರಕ್ಷಣೆ ಗೃಹ ರಕ್ಷಕ ದಳದ ಮಹಾ ಸಮಾದೇಷ್ಟರು ಮತ್ತು ನಿರ್ದೇಶಕರು, ಆರಕ್ಷಕ ಮಹಾ ನಿರ್ದೇಶಕರಾದ ಡಿಸಿಜಿ ರೇಣುಕಾ ಕೆ. ಸುಕುಮಾರ್ ಅವರು ತಿಳಿಸಿದ್ದಾರೆ.
ವಿದ್ಯಾರ್ಹತೆ: ಪದವಿ ಪಡೆದಿರಬೇಕು. ರಾಜಕೀಯದಲ್ಲಿ ಭಾಗವಹಿಸುವ ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಸಂಘಟನೆಯ ಸದಸ್ಯರಾಗಿರಬಾರದು. ಅಥವಾ ಸಂಬAಧ ಹೊಂದಿರಬಾರದು ಮತ್ತು ಯಾವುದೇ ರೀತಿಯ ರಾಜಕೀಯ ಚಳುವಳಿ ಅಥವಾ ಚಟುವಟಿಕೆಗೆ ಸಹಾಯ ಮಾಡಲು ಅಥವಾ ಸಹಾಯ ಮಾಡಲು ಚಂದಾದಾರರಾಗಿ ಭಾಗವಹಿಸಬಾರದು.
ಯಾವುದೇ ನ್ಯಾಯಾಲಯ ಅಥವಾ ವಿಚಾರಣೆಯ ಆಯೋಗದಿಂದ ಯಾವುದೇ ಅಪರಾಧಕ್ಕಾಗಿ ಅಥವಾ ದೋಷಾರೋಪಣೆಗೆ ಗುರಿಯಾಗಬಾರದು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದAದು ಐವತ್ತು ವರ್ಷಕ್ಕಿಂತ ಹೆಚ್ಚಿರಬಾರದು. ೨೦ ಕಿ.ಮೀ. ವ್ಯಾಪ್ತಿಯೊಳಗೆ ವಾಸಿಸುತ್ತಿರಬೇಕು. ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಸದೃಢರಾಗಿದ್ದಾರೆಂದು ಜಿಲ್ಲಾ ಶಸ್ತçಚಿಕಿತ್ಸಕರಿಂದ ಪ್ರಮಾಣೀಕರಿಸಬೇಕು.
ಸೇವೆಗಳು ಮತ್ತು ಸೇವೆಯ ಕನಿಷ್ಟ ಅವಧಿ ಐದು ವರ್ಷಗಳ ಮಿಲಿಟರಿ ಸೇವೆ, ಪ್ಯಾರಾ ಮಿಲಿಟರಿ ಸೇವೆ, ಪೊಲೀಸ್ ಸೇವೆ, ಶೌರ್ಯ ಪ್ರಶಸ್ತಿ ಪುರಸ್ಕೃತರಾಗಿರಬೇಕು. ಎನ್ಸಿಸಿ ಪ್ರಮಾಣ ಪತ್ರ ಹೊಂದಿರಬೇಕು.