ಮಡಿಕೇರಿ, ಫೆ. ೧೪: ಅರೆಸೇನಾಪಡೆಯ ಯೋಧರ ಕೋರಿಕೆಗಳಿಗೆ ಸ್ಪಂದಿಸದೆ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಕೊಡಗು ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟ ಆರೋಪಿಸಿದೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಜಿ. ಯತೀಶ್, ಅರೆಸೇನಾಪಡೆಯು ಗಡಿ, ಆಂತರಿಕ ಸುರಕ್ಷತೆ, ಕೈಗಾರಿಕಾ ಭದ್ರತೆ, ಚುನಾವಣೆಯ ಕರ್ತವ್ಯ ಹಾಗೂ ಅತೀ ಮಹತ್ವ ಪೂರ್ಣ ವಿಭಾಗಗಳಲ್ಲಿ ಕರ್ತವ್ಯಕ್ಕೆ ನಿರ್ವಹಿಸುತ್ತಿದ್ದು, ಈ ಯೋಧರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸದೆ ನಿರ್ಲಕ್ಷö್ಯವಹಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಗಮನ ಸೆಳೆಯಲು ಅರೆಸೇನಾಪಡೆಯ ಮಾಜಿ ಯೋಧರ ರಾಷ್ಟಿçÃಯ ಒಕ್ಕೂಟ ರಾಜಧಾನಿ ನವದೆಹಲಿಯಲ್ಲಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಕೊಡಗು ಜಿಲ್ಲೆಯಲ್ಲಿ ‘ಪ್ರೀಯ ದೇಶವಾಸಿಗರೇ’ ಎಂಬ ಶೀರ್ಷಿಕೆಯಡಿ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ನೀಡಲಾಗುತ್ತದೆ ಎಂದರು.
ಸೇನಾಪಡೆಯ ಯೋಧರಿಗೆ ಕೊಡಗಿನ ವೀರಾಜಪೇಟೆ ಮತ್ತು ಮಡಿಕೇರಿಯಲ್ಲಿ ಸಿಎಸ್‌ಡಿ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದ್ದು, ಅದನ್ನು ಮೇಲ್ದರ್ಜೆಗೇರಿಸಿ ಅರೆಸೇನಾಪಡೆ ಯೋಧರಿಗೂ ವಿಸ್ತರಿಸಬೇಕು, ನಿವೃತ್ತ ಯೋಧರ ಆರೋಗ್ಯ ಕ್ಷೇಮಕ್ಕಾಗಿ ಸೈನಿಕರಿಗೆ ಸಿಗುವ ಸೌಲಭ್ಯಗಳು ಅರೆಸೇನಾಪಡೆಯ ಯೋಧರಿಗೂ ಸಿಗುವಂತಾಗಬೇಕು ಎಂದು ಮನವಿ ಮಾಡಿದರು.
ಒಕ್ಕೂಟದ ನಿರ್ದೇಶಕ ಎ.ಟಿ. ಉತ್ತಯ್ಯ ಮಾತನಾಡಿ, ಇತರ ಜಿಲ್ಲೆಗಳಿಗೆ ಹೋಲಿಸದರೆ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ನಿವೃತ್ತ ಹಾಗೂ ಸೇವೆ ಸಲ್ಲಿಸುತ್ತಿರುವ ಅರೆಸೇನಾಪಡೆಯ ಯೋಧರಿದ್ದು, ನಿವೃತ್ತ ಯೋಧರ ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ನಿವಾರಿಸಲು ನಿವೃತ್ತ ಯೋಧರ ಕಚೇರಿ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ನಿರ್ದೇಶಕರಾದ ಕೆ.ಜಿ. ತಂಗಮ್ಮ ಮಾತನಾಡಿ, ನಿವೃತ್ತ ಯೋಧರ ಮತ್ತು ವಿಧವೆಯರ ನಿವೃತ್ತಿ ವೇತನದ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರಕಾರ ಕ್ರಮಕೈಗೊಳ್ಳಬೇಕು ಮತ್ತು ವಿಧವೆಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು, ಸೇವೆಯಲ್ಲಿರುವವರ ಮಕ್ಕಳಿಗೆ ಸಿಗುವ ವಿದ್ಯಾರ್ಥಿ ವೇತನ ನಿವೃತ್ತ ಯೋಧರ ಮಕ್ಕಳಿಗೂ ಸಿಗÀಬೇಕು ಮತ್ತು ಉನ್ನತ ಶಿಕ್ಷಣದಲ್ಲಿ ನಿವೃತ್ತ ಯೋಧರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಒದಗಿಸ ಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಪುಲಿಯಂಡ ಎಂ.ಚAಗಪ್ಪ, ಕಾರ್ಯದರ್ಶಿ ನೂರೇರ ಭೀಮಯ್ಯ ಉಪಸ್ಥಿತರಿದ್ದರು.