ಮಡಿಕೇರಿ, ಫೆ. ೧೪: ವಿಕಾಸ ಜನಸೇವಾ ಟ್ರಸ್ಟ್, ಸುಂಟಿಕೊಪ್ಪ ನೈಸ್ ಟೈರ‍್ಸ್ ವತಿಯಿಂದ ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಗರದ ಜಿ.ಟಿ. ವೃತ್ತದ ಬಳಿ ಇರುವ ಸರಕಾರಿ ಬಸ್ ತಂಗುದಾಣದಲ್ಲಿ ನಡೆಯಿತು.

ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಆಯುಕ್ತ ರಾಮದಾಸ್, ಹಿರಿಯ ನಾಗರಿಕರ ವೇದಿಕೆಯ ಜಿ.ಟಿ. ರಾಘವೇಂದ್ರ, ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ವಿಮಲ, ವಿಕಾಸ್ ಜನಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಹೆಚ್.ಕೆ. ರಮೇಶ್, ನಗರಸಭಾ ಸದಸ್ಯರಾದ ಶ್ವೇತಾ, ಸಬಿತಾ ಮತ್ತಿತರರು ಪಾಲ್ಗೊಂಡಿದ್ದರು.

ಸುAಟಿಕೊಪ್ಪ: ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸೋಮವಾರ ಸಂಜೆ ಕನ್ನಡ ವೃತ್ತದಲ್ಲಿ ಪುಷ್ಪ ನಮನ ಆರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ಮಂಜುನಾಥ್, ಶಬ್ಬೀರ್, ಆಲಿಕುಟ್ಟಿ, ಪಿ.ಆರ್. ಸುನಿಲ್‌ಕುಮಾರ್, ಬಿ.ಎಂ.ಸುರೇಶ್, ನಾಗರತ್ನ, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ರಮೇಶ್ ಪಿಳ್ಳೆ, ಬಿ.ಎಸ್. ಅಶೋಕ, ಪವಿತ್ರ ಶೆಟ್ಟಿ, ಕವಿತ, ಶಕ್ತಿ ಕೇಂದ್ರದ ಪ್ರಮುಖ್‌ಗಳಾದ ಬಿ.ಕೆ. ಪ್ರಶಾಂತ್, ವಾಸು, ಸುಂಟಿಕೊಪ್ಪ ನಗರ ಕಾಂಗ್ರೆಸ್ ಕೆ.ಐ. ರಫೀಕ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್, ಕಾರ್ಮಿಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಅಣ್ಣಾಶರೀಫ್, ಜಿಲ್ಲಾಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್, ಸುಂಟಿಕೊಪ್ಪ ಜೆಸಿಐ ಕಾರ್ಯದರ್ಶಿ ನಿರಂಜನ್, ಆಟೋ ಚಾಲಕರು ಹಾಗೂ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಯ ಸದಸ್ಯರು ಇದ್ದರು.

ಸಿದ್ದಾಪುರ: ಸಿದ್ದಾಪುರದ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ, ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಗೊಳಗಾಗಿ ವೀರ ಮರಣವನ್ನಪ್ಪಿದ ಸೈನಿಕರ ನೆನಪಿಗಾಗಿ ಪುಣ್ಯಸ್ಮರಣಾ ಕಾರ್ಯಕ್ರಮ ನಗರದ ಬಸ್ ನಿಲ್ದಾಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ ಪ್ರಿನ್ಸ್ ಗಣಪತಿ, ಅನಿಲ್, ಪ್ರವೀಣ್ ಇನ್ನಿತರರು ಹಾಜರಿದ್ದರು.