ಸೋಮವಾರಪೇಟೆ, ಫೆ. ೧೪: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪ್ರಶಸ್ತಿಗೆ ಇಲ್ಲಿನ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೆ.ಎಸ್. ಸುಧೀಕ್ಷಾ ಭಾಜನಳಾಗಿದ್ದಾಳೆ.

೨೦೨೧-೨೨ರ ಸಾಲಿನ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಸ್ಪರ್ಧೆಯ ತಾರ್ಕಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಫಲಕದೊಂದಿಗೆ ರೂ. ೧೦ ಸಾವಿರ ನಗದು ನೀಡಿ ಗೌರವಿಸಲಾಗಿದೆ. ಸಾಂದೀಪನಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಬೇಳೂರು ಗ್ರಾ.ಪಂ. ಸದಸ್ಯ ಕೆ.ಪಿ. ಸುದರ್ಶನ್ ಹಾಗೂ ಸಾಂದೀಪನಿ ಶಾಲಾ ಶಿಕ್ಷಕಿ ದೀಪಿಕಾ ಅವರುಗಳು ಪುತ್ರಿ.