ನಾಪೋಕ್ಲು, ಫೆ. ೧೪ : ನಾಪೋಕ್ಲು ಭಗವತಿ ದೇವಾಲಯದ ಅಧ್ಯಕ್ಷರಾಗಿ ಕುಲ್ಲೇಟಿರ ಗುರುವಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ದೇವಾಲಯದ ಸಮುದಾಯ ಭವನದಲ್ಲಿ ಭಗವತಿ ದೇವಾಲಯದ ಉಪಾಧ್ಯಕ್ಷ ಕಂಗಾAಡ ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಅರೆಯಡ ಕರುಂಬಯ್ಯ (ರಘು) ಪ್ರಧಾನ ಕಾರ್ಯದರ್ಶಿಯಾಗಿ ಕಂಗಾAಡ ಜಾಲಿ ಪೂವಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಸದಸ್ಯರಾಗಿ ಕುಲ್ಲೇಟಿರ ಶಂಕರಿ ಚಂಗಪ್ಪ, ಕೇಲೇಟಿರ ವಾಸು ಮುದ್ದಯ್ಯ, ನಾಟೋಳಂಡ ಸಚಿನ್ ಸುಬ್ಬಯ್ಯ, ಟಿ. ಲಕ್ಷö್ಮಣ, ಶಿವಚಾಳಿಯಂಡ ಅಪ್ಪಯ್ಯ, ಬೊಪ್ಪಂಡ ಕುಶಾಲಪ್ಪ, ಬೆಲ್ಲು ಕುಶಾಲಪ್ಪ, ಪಾಡಿಯಮ್ಮಂಡ ಅಪ್ಪಣಮ್ಮಯ್ಯ, ಮಿಟ್ಟು, ಕುಂದೈರೀರ ತಮ್ಮಯ್ಯ, ಬೊಪ್ಪೇರ ಕಾವೇರಪ್ಪ , ಅಜ್ಜೇಟಿರ ಮುತ್ತಪ್ಪ, ಕೊಂಬAಡ ಗಣೇಶ್, ನಂದ, ಕಲ್ಲೇಂಗಡ ಪೂವಯ್ಯ, ಚಿಯಕಪೂವಂಡ ರಮೇಶ್ ಇವರುಗಳನ್ನು ಆಯ್ಕೆ ಮಾಡಲಾಯಿತು.

ಹಾಲಿ ಅಧ್ಯಕ್ಷರಾಗಿದ್ದ ಕುಲ್ಲೇಟಿರ ರಘು ಮುತ್ತಪ್ಪ ಮತ್ತು ಉಪಾಧ್ಯಕ್ಷರಾಗಿದ್ದ ಕಂಗಾAಡ ಉತ್ತಪ್ಪನವರು ಅನಾರೋಗ್ಯದ ಕಾರಣದಿಂದ ತಮ್ಮಗಳ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರಿಂದ ಈ ನೂತನ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಗೂ ಮುನ್ನ ಸುಮಾರು ೫೬ ವರ್ಷಗಳ ಕಾಲ ದೇವಾಲಯದ ಆಡಳಿತ ಮಂಡಳಿಯಲ್ಲಿ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಅರೆಯಡ ಸೋಮಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.